ಆ್ಯಪ್ನಗರ

ಬೈಲವಾಡ ಕೆರೆ ಪುನರುಜ್ಜೀವನಕ್ಕೆ ಚಾಲನೆ

ಬೆಳಗಾವಿ: ಹೂಳು ತುಂಬಿಕೊಂಡು ನೀರು ನಿಲ್ಲದಂಥ ಸ್ಥಿತಿಗೆ ತಲುಪಿದ್ದ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಎಂಟು ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತುವ ...

Vijaya Karnataka 8 Mar 2019, 5:00 am
ಬೆಳಗಾವಿ : ಹೂಳು ತುಂಬಿಕೊಂಡು ನೀರು ನಿಲ್ಲದಂಥ ಸ್ಥಿತಿಗೆ ತಲುಪಿದ್ದ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಎಂಟು ಎಕರೆ ವಿಸ್ತೀರ್ಣದ ಕೆರೆ ಹೂಳೆತ್ತುವ ಕಾರ್ಯಕ್ಕೆ ಬೆಳಗಾವಿಯ ಪ್ಯಾಸ್‌ ಫೌಂಡೇಶನ್‌ ಸಂಸ್ಥೆ ಚಾಲನೆ ನೀಡಿದೆ.
Vijaya Karnataka Web BLG-0703-2-52-7PRAMOD12


ಮಳೆಗಾಲದಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿದ್ದರೂ ಜನವರಿ ಹೊತ್ತಿಗೆ ಒಣಗಿ ಹೋಗುತ್ತಿತ್ತು. ಇದರಿಂದ ಗ್ರಾಮದ ಜನರು ನೀರಿಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಅದಕ್ಕಾಗಿ ಪ್ಯಾಸ್‌ ಫೌಂಡೆಶನ್‌ ಕೆರೆಯನ್ನು ಸುಮಾರು ಐದು ಅಡಿಗಳ ಆಳದವರೆಗೆ ಹೂಳೆತ್ತಿ ನೀರು ಸಂಗ್ರಹದ ಸಾಮರ್ಥ್ಯ‌ ದ್ವಿಗುಣಗೊಳಿಸುವ ಕಾರ್ಯ ಕೈಗೆತ್ತಿಕೊಂಡಿದೆ.

ಫೌಂಡೇಶನ್‌ ಅಧ್ಯಕ್ಷ ಡಾ. ಮಾಧವ ಪ್ರಭು ಪೂಜೆ ಸಲ್ಲಿಸಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಡಾ. ಪ್ರೀತಿ ದೊಡವಾಡ, ಅಭಿಮನ್ಯು ಡಾಗಾ, ಸತೀಶ ಲಾಡ್‌, ದೇಪಕ ಓವುಲಕರ, ಗೋಪಾಲ ಗಾವಡೆ, ಮಹೇಶ ಬಾಗಿ, ಬೈಲವಾಡ ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಣಿ ಗಿರೆಪ್ಪನವರ, ಜಿಪಂ ಸದಸ್ಯ ಅನಿಲ ಮ್ಯಾಕಲಮರಡಿ, ವಿ.ಆರ್‌. ಗಿರೆಪ್ಪನವರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ