ಆ್ಯಪ್ನಗರ

ಬೀದಿಯಲ್ಲಿ ಸಿಕ್ಕಿತು ಸರಕಾರಿ ಆಸ್ಪತ್ರೆ ಇಸಿಜಿ ಮಶಿನ್‌!

ಹುಕ್ಕೇರಿ (ಬೆಳಗಾವಿ): ಸ್ಥಳೀಯ ಸರಕಾರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ...

Vijaya Karnataka 21 Jul 2019, 5:00 am
ಹುಕ್ಕೇರಿ (ಬೆಳಗಾವಿ) : ಸ್ಥಳೀಯ ಸರಕಾರಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದ ಇಸಿಜಿ ಮಶಿನ್‌ ಬೀದಿ ಬದಿ ಪತ್ತೆಯಾಗಿದೆ!
Vijaya Karnataka Web ecg machine of government hospital found on street
ಬೀದಿಯಲ್ಲಿ ಸಿಕ್ಕಿತು ಸರಕಾರಿ ಆಸ್ಪತ್ರೆ ಇಸಿಜಿ ಮಶಿನ್‌!


ಪುರಸಭೆಯ ಪೌರ ಕಾರ್ಮಿಕರು ಕೋರ್ಟ್‌ ಸರ್ಕಲ್‌ ಹತ್ತಿರ ಕಸ ಗುಡಿಸುತ್ತಿದ್ದ ಸಂದರ್ಭದಲ್ಲಿ ಇಸಿಜಿ ಯಂತ್ರ ದೊರೆತಿದ್ದು, ಅವರು ಈ ಬಗ್ಗೆ ಪುರಸಭೆ ಅಧಿಕಾರಿ ಸಂತೋಷ ಹೆಳನ್ನವರ ಅವರಿಗೆ ವಿಷಯ ತಿಳಿಸಿದ್ದಾರೆ. ಅವರು ಪರಿಶೀಲನೆ ನಡೆಸಿದಾಗ ಅದು ಸರಕಾರಿ ಆಸ್ಪತ್ರೆಯಲ್ಲಿನ ಇಸಿಜಿ ಯಂತ್ರ ಎಂಬುದು ಖಚಿತವಾಗಿದ್ದು, ವೈದ್ಯಾಧಿಕಾರಿಗಳಿಗೆ ತಲುಪಿಸಿದ್ದಾರೆ. ಆದರೆ, ಇಸಿಜಿ ಯಂತ್ರದಲ್ಲಿನ ಬೆಲೆಬಾಳುವ ಮುಖ್ಯ ಸಲಕರಣೆಗಳನ್ನು ಕಿತ್ತು ಎಸೆಯಲಾಗಿದೆ ಎಂದು ತಿಳಿದುಬಂದಿದೆ.

ಆರೋಗ್ಯಾಧಿಕಾರಿ ಭೇಟಿ: ಆಸ್ಪತ್ರೆಯಲ್ಲಿನ ಇಸಿಜಿ ಯಂತ್ರ ನಾಪತ್ತೆಯಾಗಿರುವ ಕುರಿತು 'ವಿಜಯ ಕರ್ನಾಟಕ'ದಲ್ಲಿ ಶನಿವಾರ ಪ್ರಕಟವಾದ ವರದಿ ಗಮನಿಸಿ ಚಿಕ್ಕೋಡಿ ಜಿಲ್ಲಾ ಅಪರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶೈಲಜಾ ತಮ್ಮನ್ನವರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕು ಅರೋಗ್ಯ ಅಧಿಕಾರಿ ಉದಯ ಕುಡಚಿ ಉಪಸ್ಥಿತರಿದ್ದರು.

ಯಂತ್ರ ನಾಪತ್ತೆಯಾದ ಕುರಿತು ತನಿಖೆ ನಡೆಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೇರೆ ಆರೋಗ್ಯ ಕೇಂದ್ರದಿಂದ ಇಸಿಜಿ ಯಂತ್ರದ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್‌ ಸಮಸ್ಯೆಗೆ ಸಂಬಂಧಿಸಿದಂತೆ ಹೊಸ ಜನರೇಟರ್‌ ಅಳವಡಿಸಲು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ.
- ಶೈಲಜಾ ತಮ್ಮನ್ನವರ, ಅಪರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ