ಆ್ಯಪ್ನಗರ

ರೈತರು ತೋಟಗಾರಿಕಾ ಬೆಳೆಗಳಿಗೆ ಒತ್ತು ನೀಡಿ

ಹುಕ್ಕೇರಿ : ತೋಟಗಾರಿಕೆ ಮೂಲಕ ರೈತರಿಗೆ ತರಕಾರಿ ಬೆಳೆಗಳ ಜತೆಗೆ ಹಣ್ಣು ಬೆಳೆಗಳಿಗೆÜ ಸಹಾಯಧನ ನೀಡಲಾಗುತ್ತಿದ್ದು ರೈತರು ತೋಟಗಾರಿಗೆ ಬೆಳೆಗಳಿಗೆ ಒತ್ತು ...

Vijaya Karnataka 1 Jul 2019, 5:00 am
ಹುಕ್ಕೇರಿ: ತೋಟಗಾರಿಕೆ ಮೂಲಕ ರೈತರಿಗೆ ತರಕಾರಿ ಬೆಳೆಗಳ ಜತೆಗೆ ಹಣ್ಣು ಬೆಳೆಗಳಿಗೆÜ ಸಹಾಯಧನ ನೀಡಲಾಗುತ್ತಿದ್ದು ರೈತರು ತೋಟಗಾರಿಗೆ ಬೆಳೆಗಳಿಗೆ ಒತ್ತು ನೀಡಬೇಕೆಂದು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಶೇಖರ ಪಾಟೀಲ ಹೇಳಿದರು.
Vijaya Karnataka Web BEL-28 HUKKERI 02


ಅವರು ತಾಲೂಕಿನ ಗುಡನಟ್ಟಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೋಟಗಾರಿಕೆ ಕಚೇರಿಯಲ್ಲಿ ರೈತರಿಗೆ ಬೀಜಗಳನ್ನು ವಿತರಿಸಲಾಗುತ್ತಿದೆ. ಹಾಗೂ ತೋಟಪಟ್ಟಿ ಬದುಗಳಲ್ಲಿ ನೆಡಲು ವಿವಿಧ ತಳಿಯ ಸಸಿಗಳನ್ನು ಇಲಾಖೆಯಿಂದ ವಿತರಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.

ಪ್ರಾಧ್ಯಾಪಕಿ ಪೂರ್ಣಿಮಾ ಮಟ್ಟಿ , ರೈತರು ತರಕಾರಿ ಬೆಳೆ ಮಾಡುವ ಮುನ್ನ ಕೀಟ ಬಾಧೆಯಿಂದ ಬೆಳೆಯನ್ನು ತಪ್ಪಿಸುವುಕ್ಕಾಗಿ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಿದರು.

ಮೇಲ್ವಿಚಾರಕ ಅಜ್ಜಪ್ಪ ಬೇಗೂರ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಸದಸ್ಯ ರಾಯಗೌಡ ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಗಣ್ಯರಾದ ದುಂಡಪ್ಪ ಪಾಟೀಲ, ಕೆಂಪಣ್ಣ ಪಾಟೀಲ, ತುಕಾರಾಮ ಜಂಜರವಾಡ, ಯೋಜನಾಧಿಕಾರಿ ಅನಿತಾ, ಉಪಸ್ಥಿತರಿದ್ದರು. ಮಂಜುಳಾ ಹಿರೇಮಠ ಸ್ವಾಗತಿಸಿದರು. ಗಂಗಮ್ಮ ಬಸ್ಸಾಪುರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ