ಆ್ಯಪ್ನಗರ

ಉಗರಗೋಳ ರಸ್ತೆಯಲ್ಲಿ ಅವಶ್ಯ ಮೂಲ ಸೌಕರ್ಯ

ಉಗರಗೋಳ: ''ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಉಗರಗೋಳ ರಸ್ತೆ ...

Vijaya Karnataka 11 Oct 2019, 5:00 am
ಉಗರಗೋಳ: ''ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಉಗರಗೋಳ ರಸ್ತೆ ಮಾರ್ಗದಲ್ಲಿಭಕ್ತಾದಿಗಳಿಗೆ ಅನುಕೂಲಕ್ಕಾಗಿ ಅವಶ್ಯ ಮೂಲಸೌಕರ್ಯ ಒದಗಿಸಲಾಗುವುದು'' ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದರು.
Vijaya Karnataka Web 10UGL1_53


ವಿಜಯದಶಮಿ ನಿಮಿತ್ತ ಯಲ್ಲಮ್ಮನ ಗುಡ್ಡದಲ್ಲಿಮಂಗಳವಾರ ದೇವಸ್ಥಾನದಿಂದ ಉಗರಗೋಳ ಬಳಿ ಇರುವ ಬಣ್ಣೆಮ್ಮನ ಕಟ್ಟೆಯವರೆಗೆ ಆಯುಧಗಳನ್ನು ಅರ್ಚಕರೊಂದಿಗೆ ಹೊತ್ತು ಸಾಗಿ, ಅಲ್ಲಿಬಣ್ಣೆಮ್ಮನ ಕಟ್ಟೆಗೆ ಪೂಜೆ ಸಲ್ಲಿಸಿ ಬನ್ನಿ ಮುಡಿದ ಬಳಿಕ ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಯಲ್ಲಮ್ಮನ ಗುಡ್ಡದಿಂದ ಉಗರಗೋಳ ರಸ್ತೆಯಲ್ಲಿನ ಬಣ್ಣೆಮ್ಮ ಕಟ್ಟೆಯ ಸುತ್ತಲೂ ಅಂದಾಜು 5 ಲಕ್ಷ ರೂ. ವೆಚ್ಚದಲ್ಲಿಕಲ್ಲುಪರಸಿ ಜೋಡಿಸಲಾಗುವುದು. ಇಳಿಜಾರಿನಿಂದ ಕೂಡಿರುವ ಯಲ್ಲಮ್ಮನ ಗುಡ್ಡದಿಂದ ಉಗರಗೋಳ ರಸ್ತೆಯ ಮೂಲಕ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಬರುವ ಹುಣ್ಣಿಮೆಯೊಳಗೆ ವಿದ್ಯುತ್‌ ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ವೇಳೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ, ಸೋಮು ನಾಯ್ಕ, ಬಸವರಾಜ ಜಿರಗಾಳ, ದೇವಸ್ಥಾನದ ಕಿರಯ ಅಭಿಯಂತರ ಡಿ.ಆರ್‌. ಚವ್ಹಾಣ, ಪಂಡಿತ ಯಡೂರಯ್ಯ, ವಿಶ್ವನಾಥ ಲಿಂಗಋು, ಕೊಳ್ಳಪ್ಪಗೌಡ ಗಂದಿಗವಾಡ ಸೇರಿದಂತೆ ಉಗರಗೋಳ, ಚುಳಕಿ, ಚಿಕ್ಕುಂಬಿ, ಸವದತ್ತಿ, ಯಡ್ರಾಂವಿ, ಬೆಡಸೂರ, ಹಂಚಿನಾಳ, ಹೂಲಿ, ಹರ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ದೇವಸ್ಥಾನ ಅರ್ಚಕರು, ದೇವಸ್ಥಾನ ಸಿಬ್ಬಂದಿ ಭಕ್ತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ