ಆ್ಯಪ್ನಗರ

ಮಂಗನ ಸಮಾಧಿ ಸ್ಥಳದಲ್ಲಿ ಹನುಮ ಮೂರ್ತಿ ಪ್ರತಿಷ್ಠಾಪನೆ

ತೆಲಸಂಗ: ಗ್ರಾಮದಲ್ಲಿ ಇತ್ತೀಚೆಗೆ ನಿಧನಹೊಂದಿದ ಮಂಗನ ಅಂತಿಮ ಸಂಸ್ಕಾರ ಕೈಗೊಂಡ ಸ್ಥಳದಲ್ಲಿ ಹನುಮ ಜಯಂತಿಯ ದಿನವಾದ ಶುಕ್ರವಾರ ಸಮಾಧಿ ಕಟ್ಟಿ ಹನುಮನ ಮೂರ್ತಿ ...

Vijaya Karnataka 20 Apr 2019, 5:00 am
ತೆಲಸಂಗ : ಗ್ರಾಮದಲ್ಲಿ ಇತ್ತೀಚೆಗೆ ನಿಧನಹೊಂದಿದ ಮಂಗನ ಅಂತಿಮ ಸಂಸ್ಕಾರ ಕೈಗೊಂಡ ಸ್ಥಳದಲ್ಲಿ ಹನುಮ ಜಯಂತಿಯ ದಿನವಾದ ಶುಕ್ರವಾರ ಸಮಾಧಿ ಕಟ್ಟಿ ಹನುಮನ ಮೂರ್ತಿ ಪ್ರತಿಷ್ಠಾಪಿಸಲಾಯಿತು.
Vijaya Karnataka Web BEL-19TELSANG2


ಪೂಜಾ ಕಾರ್ಯಕ್ಕೆ ಚಾಲನೆ ನೀಡಿದ ಗ್ರಾಮದ ನಾಗಯ್ಯಾಸ್ವಾಮೀಜಿ ಪೂಜಾರಿ ಅವರು 'ಜೀವ ಬಿಟ್ಟ ಪ್ರಾಣಿಯಲ್ಲಿ ದೇವರನ್ನು ಕಂಡ ಇಲ್ಲಿನ ಜನ ಮಾನವೀಯ ಮೌಲ್ಯವನ್ನು ಎತ್ತಿಹಿಡಿದಿರುವುದು ಸಂತಸದ ವಿಷಯ. ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಸಾಲದು, ಮೂರ್ತಿ ಕೂರಿಸಿದ ಆವರಣ ಸ್ವಚ್ಛತೆ ಹಾಗೂ ನಿತ್ಯ ಪೂಜೆ ಕೈಗೊಂಡು ಧರ್ಮಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

ಪಿಕೆಪಿಎಸ್‌ ಉಪಾಧ್ಯಕ್ಷ ಪರಸಪ್ಪ ಥೈಕಾರ, ಹಿರಿಯರಾದ ರಾಜು ಸಿಂದಗಿ, ಸಂಜು ಹುಜರೆ, ಮೃತ್ಯುಂಜಯ ಮಠದ, ಅನೀಲ ಪೋಳ, ಬಸವರಾಜ ಖೊಳಂಬಿ, ಪಂಡಿತಯ್ಯಾ ಮಠಪತಿ, ಸಂಗಮೇಶ ಕುಮಠಳ್ಳಿ, ಮಹಾಂತೇಶ ಅವಟಿ, ಸಂತೋಷ ಕಾಮನ್‌, ಜಗದೀಶ ಮುಧೋಳ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ