ಆ್ಯಪ್ನಗರ

ಪ್ರತಿಯೊಬ್ಬರೂ ಕನ್ನಡದ ಉಳಿವಿಗಾಗಿ ಶ್ರಮಿಸುವುದು ಅಗತ್ಯ

ಚಿಕ್ಕೋಡಿ: ಈ ನಾಡಿನ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ, ಗೌರವ ಹೊಂದುವುದರ ಜತೆಗೆ ಕನ್ನಡದ ಉಳಿವಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ನಿಪ್ಪಾಣಿ ಕೆಎಲ್‌ಇ ...

Vijaya Karnataka 7 May 2019, 5:00 am
ಚಿಕ್ಕೋಡಿ : ಈ ನಾಡಿನ ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ, ಗೌರವ ಹೊಂದುವುದರ ಜತೆಗೆ ಕನ್ನಡದ ಉಳಿವಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ನಿಪ್ಪಾಣಿ ಕೆಎಲ್‌ಇ ಸಂಸ್ಥೆಯ ಶಿಕ್ಷ ಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದೇವೇಂದ್ರ ಬಡಿಗೇರಿ ಹೇಳಿದರು.
Vijaya Karnataka Web BEL-6CKD2


ಇಲ್ಲಿನ ಸಿಎಲ್‌ಇ ಸಂಸ್ಥೆಯ ಬಿ.ಸಿ. ಗಂಗಾಲ ಶಿಕ್ಷ ಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ನಾಡು, ನೆಲ, ಜಲ, ನುಡಿಗೆ ಸಂಬಂಧಿಸಿದಂತೆ ಎಲ್ಲ ಮನಸ್ಸುಗಳನ್ನು ಒಂದು ಮಾಡುವಲ್ಲಿ ಕಸಾಪ ಪ್ರಯತ್ನಿಸುತ್ತ ಬಂದು ಯಶಸ್ವಿಯಾಗಿದೆ ಎಂದರು.

ಸಾಹಿತಿ ಡಾ. ಸುಬ್ರಾವ ಎಂಟೆತ್ತಿನವರ ಮಾತನಾಡಿ, ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷ ಣೆ ಮಾಡುವುದು ಕಸಾಪದ ಪ್ರಮುಖ ಗುರಿಯಾಗಿದೆ ಎಂದರು.

ಬಿ.ಸಿ.ಗಂಗಾಲ ಶಿಕ್ಷ ಣ ಮಹಾವಿದ್ಯಾಲಯದ ಪ್ರಶಿಕ್ಷ ಣಾರ್ಥಿಗಳು ಕನ್ನಡ ಪರ ಸಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಸಾಪ ತಾಲೂಕಾಧ್ಯಕ್ಷ ಶ್ರೀಪಾದ ಕುಂಬಾರ ಅಧ್ಯಕ್ಷ ತೆ ವಹಿಸಿದ್ದರು.

ಎಸ್‌.ಸಿ. ಗದಗಿಮಠ, ಸಿದ್ದಲಿಂಗ ಮೆಟಗುಡ್ಡ, ಎಸ್‌.ಎಚ್‌.ಮೇಲ್ದಾಪುರ, ಎಸ್‌.ಐ. ಹೂವಬಳ್ಳಿ, ಎಸ್‌.ಎಫ್‌. ಮೊಗಲಾನಿ, ಬಿ.ಎಸ್‌. ಹಿರೇಮಠ, ಎಸ್‌.ಬಿ. ಪಾಟೀಲ, ಜೆ.ಬಿ. ಬಡಚಿ ಉಪಸ್ಥಿತರಿದ್ದರು.

ಗೌರವ ಕಾರ್ಯದರ್ಶಿ ಡಾ.ಸುರೇಶ ಉಕ್ಕಲಿ ಸ್ವಾಗತಿಸಿದರು. ಕವಿತಾ ಶಿವರಾಮ ನಿರೂಪಿಸಿದರು. ನಂದಾ ಗುಡಮೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ