ಆ್ಯಪ್ನಗರ

ರಮೇಶ್‌ ಬೆಂಬಲಿಗರಿಂದ ಬಿಜೆಪಿಗೆ ಬಾಹ್ಯ ಬೆಂಬಲ

ಬೆಳಗಾವಿ: ಗೋಕಾಕದಲ್ಲಿ ಜಾರಕಿಹೊಳಿ ಸಹೋದರರ ಚುನಾವಣಾ ...

Vijaya Karnataka 3 Nov 2019, 5:00 am
ಬೆಳಗಾವಿ: ಗೋಕಾಕದಲ್ಲಿ ಜಾರಕಿಹೊಳಿ ಸಹೋದರರ ಚುನಾವಣಾ ಕದನ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಗೋಕಾಕ ನಗರಸಭೆ, ಕೊಣ್ಣೂರು ಮತ್ತು ಮಲ್ಲಾಪುರ ಪಿ.ಜಿ. ಪಟ್ಟಣ ಪಂಚಾಯಿತಿಗಳ 62 ಸದಸ್ಯರು ಶನಿವಾರ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ.
Vijaya Karnataka Web 2GOKAK051142


ಆ ಮೂಲಕ, ಕ್ಷೇತ್ರದ ಮೇಲೆ ಸತೀಶ್‌ ಜಾರಕಿಹೊಳಿ ಹಾಗೂ ಲಖನ್‌ ಜಾರಕಿಹೊಳಿಯ ಹಿಡಿತ ಯತ್ನಕ್ಕೆ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಕೊಡಲಿ ಪೆಟ್ಟು ನೀಡಿದ್ದಾರೆ.

ಗೋಕಾಕ ನಗರದ ಲಕ್ಷ್ಮಿ ದೇವಿ ದರ್ಶನ ಪಡೆದ ಮೂರೂ ಸ್ಥಳೕಯ ಸಂಸ್ಥೆಗಳ ಸದಸ್ಯರು ಒಟ್ಟಿಗೆ ಬೆಳಗಾವಿಗೆ ಬಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರನ್ನು ಗೃಹ ಕಚೇರಿಯಲ್ಲಿಭೇಟಿಯಾದರು. ಉಪ ಚುನಾವಣೆಯಲ್ಲಿಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿದರು.

ರಮೇಶ್‌ ಜಾರಕಿಹೊಳಿ ಬಣದ ಗೋಕಾಕ ನಗರಸಭೆಯ 23, ಮಲ್ಲಾಪುರ ಪಿ.ಜಿ.ಯ 17, ಕೊಣ್ಣೂರ ಪುರಸಭೆಯ 22 ಸದಸ್ಯರು ಬಿಜೆಪಿ ಮತ್ತು ರಮೇಶ್‌ ಪರ ಕೆಲಸ ಮಾಡುವುದಾಗಿ ಹೇಳಿದರು.

''ಬಿಜೆಪಿ ಸರಕಾರದ ಕೆಲಸ ಮೆಚ್ಚಿ ಬೆಂಬಲಿಸುತ್ತಿದ್ದೇವೆ. ನಾವು ಎಲ್ಲರೂ ಪಕ್ಷೇತರ ಸದಸ್ಯರು. ಹಾಗಾಗಿ ನಮ್ಮ ಮೇಲೆ ಯಾವ ಪಕ್ಷದ ಒತ್ತಡ ಇಲ್ಲ'', ಎಂದು ಸದಸ್ಯರ ಪರವಾಗಿ ಮಲ್ಲಾಪುರ ಪಿ.ಜಿ.ಯ ಡಿ.ಎಂ. ದಳವಾಯಿ, ಗೋಕಾಕದ ಎಸ್‌.ಎ. ಕೋತ್ವಾಲ ಗೌಡ, ಕೊಣ್ಣೂರಿನ ಮಾರುತಿ ಪೂಜಾರಿ ತಿಳಿಸಿದರು.

ರೈಲ್ವೆ ಸೇವೆಗಾಗಿ ಬಂದಿದ್ದಾರೆ!:
ರೈಲ್ವೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ''ಗೋಕಾಕ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ರೈಲ್ವೆ ಸಮಸ್ಯೆ ಬಗ್ಗೆ ಮಾತನಾಡಲು ಬಂದಿದ್ದಾರೆ. ಪಕ್ಷ ಸೇರಲು ಅಲ್ಲ'', ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ''ಸದಸ್ಯರು ಬಿಜೆಪಿಗೆ ಬೆಂಬಲ ಕೊಟ್ಟರೆ ಸಂತೋಷ. ರಮೇಶ್‌ ಜಾರಕಿಹೊಳಿ ಬಿಜೆಪಿ ಸೇರುವ ಕುರಿತು ಇನ್ನೂ ಚರ್ಚೆ ಆಗಿಲ್ಲ'', ಎಂದು ಪ್ರಶ್ನೆಗೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ