ಆ್ಯಪ್ನಗರ

ಸರಣಿ ನಷ್ಟಕ್ಕೆ ನೊಂದು ದ್ರಾಕ್ಷಿ ಬೆಳೆ ನಾಶಪಡಿಸಿದ ರೈತ

ತೆಲಸಂಗ (ಬೆಳಗಾವಿ): ಅಥಣಿ ತಾಲೂಕು ಬನ್ನೂರ ಗ್ರಾಮದ ...

Vijaya Karnataka 23 Oct 2020, 5:00 am
ತೆಲಸಂಗ (ಬೆಳಗಾವಿ): ಅಥಣಿ ತಾಲೂಕು ಬನ್ನೂರ ಗ್ರಾಮದ ಗಜಾನಂದ ಶಿವಣ್ಣ ಪೂಜಾರಿ ಎಂಬ ರೈತ ಭಾರಿ ಮಳೆ ಹಾಗೂ ವ್ಯತಿರಿಕ್ತ ಹವಾಮಾನದಿಂದ ಹಾಳಾದ ಎರಡು ಎಕರೆಯಲ್ಲಿನ ದ್ರಾಕ್ಷಿ ಗಿಡಗಳನ್ನು ಮನನೊಂದು ಗುರುವಾರ ಸಂಪೂರ್ಣ ಕಡಿದುಹಾಕಿದ್ದಾರೆ.
Vijaya Karnataka Web 22TELSANG2_53
ಅಥಣಿ ತಾಲೂಕು ಬನ್ನೂರ ಗ್ರಾಮದಲ್ಲಿ ದ್ರಾಕ್ಷಿ ಗಿಡಗಳನ್ನು ಕಡಿಯುತ್ತಿರುವ ರೈತ.


5 ವರ್ಷಗಳಿಂದ ದ್ರಾಕ್ಷಿ ಬೆಳೆದು ನಾನಾ ತೊಂದರೆಗಳನ್ನು ಎದುರಿಸುತ್ತಲೇ ಇರುವ ಅವರು ಸರಣಿ ಆಘಾತದಿಂದ ಲಕ್ಷಾಂತರ ಹಣ ಕಳೆದುಕೊಂಡ ಸಂಕಷ್ಟದಿಂದ ರೋಸಿ ಹೋಗಿ ಈ ಕೃತ್ಯಕ್ಕೆ ಕೈಹಾಕಿದ್ದಾಗಿ ತಿಳಿಸಿದರು.

''ಒಂದು ವರ್ಷ ಮಳೆ ಬರಲಿಲ್ಲ, ಇನ್ನೊಂದು ವರ್ಷ ಬೆಳೆ ಬಂದಾಗ ಅಕಾಲಿಕ ಮಳೆ ಸುರಿದು ಎಲ್ಲವೂ ಹಾಳಾಯಿತು. ಕಳೆದ ವರ್ಷ ಮಳೆ ಗಾಳಿಗೆ ಬೆಳೆದ ದ್ರಾಕ್ಷಿ ಮಣ್ಣುಪಾಲಾಯಿತು. ಅಳಿದುಳಿದ ದ್ರಾಕ್ಷಿ ಕೊರೊನಾ ಲಾಕ್‌ಡೌನ್‌ನಿಂದ ಮಾರಾಟವಾಗಲಿಲ್ಲ. ಪ್ರಸಕ್ತ ವರ್ಷದ ಆರಂಭದಲ್ಲಿಯೇ ಹವಾಮಾನದ ವ್ಯತ್ಯಾಸದಿಂದ ಎಲೆಗಳು ಉದುರಿ ಕಡ್ಡಿ ಹಣ್ಣಾಗಲಿಲ್ಲ. ವಿಪರೀತ ಮಳೆಯಿಂದ ಇದ್ದೂ ಇಲ್ಲದಂತಿರುವ ಬೆಳೆಗೆ ಕೊಡಲಿ ಏಟು ನೀಡುವುದು ಅನಿವಾರ್ಯವಾಗಿದೆ'', ಎಂದು ತಮ್ಮ ದುಃಖ ತೋಡಿಕೊಂಡರು.

ದ್ರಾಕ್ಷಿ ಬೆಳೆ ಬರಬೇಕು ಅಂದರೆ ಪ್ರತಿ ವರ್ಷ ಲಕ್ಷ ಲಕ್ಷ ಹಣ ಖರ್ಚು ಮಾಡಬೇಕು. ಒಂದರೆಡು ವರ್ಷ ಮಾಡಬಹುದು. 5 ವರ್ಷಗಳಿಂದ ಒಬ್ಬ ರೈತ ಅದೆಷ್ಟು ಸಾಲ ಮಾಡಲು ಸಾಧ್ಯ ನೀವೇ ಹೇಳಿ. ಇದು ನನ್ನೊಬ್ಬನ ಕಥೆಯಲ್ಲ. ಈ ಭಾಗದ ದ್ರಾಕ್ಷಿ ಬೆಳೆಯುವ ಪ್ರತಿಯೊಬ್ಬ ರೈತನ ಸ್ಥಿತಿ
- ಗಜಾನಂದ ಪೂಜಾರಿ, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ