ಆ್ಯಪ್ನಗರ

ಜಮೀನು ಹಕ್ಕು ಪತ್ರ ನೀಡಲು ರೈತರ ಆಗ್ರಹ

ಬೆಳಗಾವಿ: ಬ್ರಿಟಿಷ್‌ ಸರಕಾರ ದೇವೇಂದ್ರಪ್ಪ ಇನಾಮದಾರ್‌ ಅವರಿಗೆ ದಾನವಾಗಿ ಕೊಟ್ಟಿದ್ದ ಬೈಲಹೊಂಗಲ ತಾಲೂಕಿನ ಕುಲವಳ್ಳಿ ...

Vijaya Karnataka 11 Sep 2018, 5:00 am
ಬೆಳಗಾವಿ: ಬ್ರಿಟಿಷ್‌ ಸರಕಾರ ದೇವೇಂದ್ರಪ್ಪ ಇನಾಮದಾರ್‌ ಅವರಿಗೆ ದಾನವಾಗಿ ಕೊಟ್ಟಿದ್ದ ಬೈಲಹೊಂಗಲ ತಾಲೂಕಿನ ಕುಲವಳ್ಳಿ ಗ್ರಾಮದ ಜಮೀನಿನಲ್ಲಿ ನಾಲ್ಕೈದು ದಶಕಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಜಮೀನು ಹಕ್ಕು ಪತ್ರ ಕೊಡಬೇಕು ಎಂದು ಅಲ್ಲಿನ ರೈತರು ಆಗ್ರಹಿಸಿದ್ದಾರೆ.
Vijaya Karnataka Web farmers demand for land rights
ಜಮೀನು ಹಕ್ಕು ಪತ್ರ ನೀಡಲು ರೈತರ ಆಗ್ರಹ


ಇನಾಮದಾರ್‌ ಕುಟುಂಬಕ್ಕೆ ದಾನವಾಗಿ ಸಿಕ್ಕಿದ್ದ 7800 ಎಕರೆ ಪ್ರದೇಶದ ಪೈಕಿ ಸುಮಾರು ಆರು ಸಾವಿರ ಎಕರೆ ಪ್ರದೇಶದಲ್ಲಿ ನೂರಾರು ರೈತರು ನಾಲ್ಕೈದು ದಶಕಗಳಿಂದ ಕೃಷಿ ಮಾಡುತ್ತಿದ್ದಾರೆ. ಈ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಈಗ ಕೃಷಿ ಚಟುವಟಿಕೆ ಮಾಡಲು ಕೊಡುತ್ತಿಲ್ಲ. ಹೊಲದಲ್ಲಿಯೇ ಗುಂಡಿ ತೆಗೆದು ಗಿಡ ನೆಡುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಬಗ್ಗೆ 1960ರ ದಶಕದಲ್ಲಿಯೇ ಭೂ ತೆರಿಗೆ ತುಂಬಿದ್ದೇವೆ. ಕಳೆದೊಂದು ದಶಕದಿಂದ ಕಂದಾಯ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಜಿಲ್ಲಾಡಳಿತಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ, ಯಾರೂ ಸ್ಪಷ್ಟವಾದ ನಿರ್ದೇಶನ ನೀಡುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆಗಳನ್ನೆಲ್ಲ ಹಾಳು ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಕಾಶೀಂ ಅಬ್ದುಲ್‌ ಗಫಾರ್‌ ನೇಸರಗಿ, ನಾಗಪ್ಪ ಅಸ್ಲಣ್ಣವರ, ಮಹಾಂತೇಶ ಎಮ್ಮಿ ದೂರಿದರು.

ಕುಲವಳ್ಳಿಯ ದಾನದ ಜಮೀನು ದಾಖಲೆಯಲ್ಲಿ ಅರಣ್ಯ ಇಲಾಖೆ, ಕರ್ನಾಟಕ ಸರಕಾರ ಎಂದು ಸೇರಿದೆ. ಕಳೆದ ವರ್ಷ ತಹಸೀಲ್ದಾರ್‌ ಕಚೇರಿಯಿಂದ ಸರ್ವೆ ನಡೆಸಿ ರೈತರನ್ನೂ ಗುರುತಿಸಲಾಗಿದೆ. ಆದರೂ, ಜಮೀನು ಹಕ್ಕು ಪತ್ರ ಕೊಡುವ ಪ್ರಕ್ರಿಯೆ ನಡೆದಿಲ್ಲ. ಅರ್ಹ ರೈತರಿಗೆ ಕೂಡಲೇ ಹಕ್ಕು ಪತ್ರ ಕೊಡಬೇಕು ಅವರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ