ಆ್ಯಪ್ನಗರ

ಬಡ್ಡಿ ಸಮೇತ ಬೆಳೆ ವಿಮೆ ಪಾವತಿಸಲು ರೈತರ ಆಗ್ರಹ

ಬೈಲಹೊಂಗಲ: 2016-17ನೇ ಸಾಲಿನ ಬೆಳೆ ವಿಮೆಯನ್ನು ಬಡ್ಡಿ ಸಮೇತ ರೈತರ ...

Vijaya Karnataka 21 Aug 2019, 5:00 am
ಬೈಲಹೊಂಗಲ: 2016-17ನೇ ಸಾಲಿನ ಬೆಳೆ ವಿಮೆಯನ್ನು ಬಡ್ಡಿ ಸಮೇತ ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ರೈತಸೇನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-20HTP20


ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ರವಿ ಸಿದ್ದಮ್ಮನವರ ಮಾತನಾಡಿ, 2016-17ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 2,42,251 ಜನ ರೈತರು ವಿಮಾ ಕಂತು ಕಟ್ಟಿದ್ದರು. ಇದರಲ್ಲಿ ಕ್ಲೇಮ್‌ ಆಗಿದ್ದ 108.12 ಕೋಟಿ ರೂ. ರೈತರ ಖಾತೆಗಳಿಗೆ ಜಮೆ ಆಗಬೇಕಿತ್ತು. ಅಧಿಕಾರಿಗಳ ಹೇಳಿಕೆ ಪ್ರಕಾರ 5.76 ಕೋಟಿ ರೂ. ಇನ್ನೂ ರೈತರ ಖಾತೆಗೆ ಜಮೆಯಾಗಿಲ್ಲ. ಈ ಮೊತ್ತಕ್ಕೆ ಶೇ.14 ರಷ್ಟು ಬಡ್ಡಿ ಸೇರಿಸಿ ತಕ್ಷ ಣ ರೈತರ ಖಾತೆಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳೆವಿಮೆ ವಿಳಂಬ ಗಮನಿಸಿದರೆ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಈ ಕುರಿತು ತಕ್ಷ ಣ ಉನ್ನತ ಮಟ್ಟದ ತನಿಖೆಗೆ ಆದೇಶಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಮಸ್ಯೆಗೆ ಕಾರಣವಾದ ಶ್ರೀರಾಮ್‌ ಇನ್ಶೂರೆನ್ಸ್‌ ಕಂಪನಿಯನ್ನು ತಕ್ಷ ಣ ಕಪ್ಪು ಪಟ್ಟಿಗೆ ಸೇರಿಸಬೇಕು. ಪ್ರಸಕ್ತ ವರ್ಷದ ಬೆಳೆವಿಮೆ ಕಂತು ತುಂಬುವ ಅವಧಿಯನ್ನು ಅ.31 ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.

ರೈತರ ಮನವಿಗೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು, ''ಈಗಾಗಲೇ ಜಿಲ್ಲಾಧಿಕಾರಿಗಳು, ನಾನಾ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ಸೇರಿ ವಿಮೆ ಕಂತು ರೈತರ ಖಾತೆಗೆ ಜಮೆ ಮಾಡಲು ತಿಳಿಸಲಾಗಿದೆ. ಇನ್ನೂ ಸಮಸ್ಯೆ ಬಗೆಹರಿಯದ ಕಾರಣ ಆ.27 ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷ ತೆಯಲ್ಲಿ ಅಧಿಕಾರಿಗಳು, ಬ್ಯಾಂಕ್‌ ವ್ಯವಸ್ಥಾಪಕರು ಹಾಗೂ ರೈತ ಮುಖಂಡರ ಸಭೆ ನಡೆಸಿ, ರೈತರ ಖಾತೆಗಳಿಗೆ ಶೀಘ್ರ ಹಣ ಜಮೆ ಮಾಡಿಸಲು ಪ್ರಯತ್ನಿಸಲಾಗುವುದು'' ಎಂದು ಭರವಸೆ ನೀಡಿದರು. ಭರವಸೆಗೆ ಸ್ಪಂದಿಸಿ ರೈತ ಮುಖಂಡರು ಧರಣಿ ಹಿಂಪಡೆದರು.

ಈ ವೇಳೆ ಮಹಾಂತೇಶ ಹಿರೇಮಠ, ಗುರುನಾಥ ಸೋಮನ್ನವರ, ಶಿವಾನಂದ ಮಿಡಕನಟ್ಟಿ, ಉಳವಪ್ಪ ಪಾಟೀಲ, ಮಲ್ಲಯ್ಯ ಹಿರೇಮಠ, ಫಕೀರಪ್ಪ ಮುತಗಿ, ನಾಗಪ್ಪ ಇಳಿಗೇರ, ಈಶ್ವರ ಶಿಲ್ಲೇಧಾರ ಹಾಗೂ ರೈತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ