ಆ್ಯಪ್ನಗರ

ಸ್ವಚ್ಛ ಪಾತ್ರೆಯಂಥ ಮನಸ್ಸಿನಲ್ಲಿ ಜ್ಞಾನ ಬೋಧನೆಯ ಹೂ ತುಂಬಿಕೊಳ್ಳಿ

ಬೋರಗಾಂವ: ಚಾತುರ್ಮಾಸದಲ್ಲಿ ಮುನಿಗಳು ನೀಡುವ ...

Vijaya Karnataka 16 Jul 2019, 5:00 am
ಬೋರಗಾಂವ: ಚಾತುರ್ಮಾಸದಲ್ಲಿ ಮುನಿಗಳು ನೀಡುವ ಆಶೀರ್ವಚನದಲ್ಲಿ ಪಾಲ್ಗೊಂಡು ಸ್ವಚ್ಛ ಪಾತ್ರೆಯಂತಹ ಮನಸ್ಸಿನಲ್ಲಿ ಜ್ಞಾನ, ವ್ಯಸನಮುಕ್ತಿ, ತೀರ್ಥಂಕರರ ತತ್ವಗಳು, ಹಾಗೂ ಮಾನವೀಯತೆಯ ಮೂಲಮಂತ್ರಗಳ ಪುಷ್ಪಗಳನ್ನು ತುಂಬಿಕೊಳ್ಳಬೇಕು ಎಂದು 108 ಪ್ರಸನ್ನಸಾಗರ ಮುನಿಗಳು ಕರೆನೀಡಿದರು.
Vijaya Karnataka Web BEL-15ICH4


ಅವರು ಕಾರದಗಾ ಗ್ರಾಮದಲ್ಲಿ ಸೋಮವಾರ ಚಾತುರ್ಮಾಸ ಆಚರಣೆಗಾಗಿ ಮಂಗಲ ಪ್ರವೇಶ ಮಾಡಿ ಮಾತನಾಡಿದರು.

ಜಾತಿ, ಧರ್ಮ, ಅಂತಸ್ತುಗಳ ಜಾತ್ರೆಯಲ್ಲಿ ಪ್ರತಿಯೊಬ್ಬ ಮಾನವ ಸಿಲುಕಿಕೊಂಡಿದ್ದಾನೆ. ಕೇವಲ ಸ್ವಾರ್ಥವೆಂಬ ಬಲೆಯಲ್ಲಿ ಸಿಲುಕಿದವನಿಗೆ ಮಾನವೀಯತೆ, ಮಮಕಾರ, ಭ್ರಾತೃತ್ವ, ಸಂಭಂಧದ ಅರಿವು ಮಾಯವಾಗುತ್ತಿದೆ. ಅನೇಕ ವ್ಯಸನಾಧೀನತೆಗೆ ಯುವಕರಿಂದು ಅಂಟಿಕೊಳ್ಳುತ್ತಿದ್ದು ಇದರಿಂದ ಹೊರಬರಬೇಕಾದರೆ ಚಾತುರ್ಮಾಸದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಮುನಿಗಳ ಆಶೀರ್ವಚನ, ಧರ್ಮಪ್ರಬೋಧನೆ, ನಿತ್ಯಕೈಂಕರ್ಯಗಳ ಪಾಲನೆಯೊಂದಿಗೆ ಬದುಕು ಸಾರ್ಥಕಗೊಳಿಸಿಕೊಳ್ಳಬೇಕೆಂದು ಅವರು ಹೇಳಿದರು.

ಶಮನೇವಾಡಿ,ಬೇಡಕಿಹಾಳ,ಮಾಂಗೂರ,ಭೋಜ ಗ್ರಾಮದಿಂದ ಆಗಮಿಸಿದ್ದ ಎರಡು ಸಾವಿರ ಶ್ರಾವಕ-ಶ್ರಾವಕಿಯರ ಉಪಸ್ಥಿತಿಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಿಂದ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮುಖಾಂತರ ಬರಮಾಡಿಕೊಳ್ಳಲಾಯಿತು. ಮುನಿಗಳ ಪ್ರವೇಶದ ವೇಳೆಗೆ ಗ್ರಾಮದ ಪ್ರತಿ ಮನೆಯಂಗಳದಲ್ಲಿ ರಂಗೋಲಿ ಬಿಡಿಸಿ, ಧರ್ಮಧ್ವಜ,ಹಾರಿಸುವುದರೊಂದಿಗೆ ಮುನಿಗಳ ಪಾದಪೂಜೆ ಮಾಡಲಾಯಿತು. ಜೈನ ಸಮುದಾಯ ಭವನದ ದಾರಿಯಲ್ಲಿ 1008 ಅಡಿಗಳ ವಿಸ್ತೀರ್ಣದ ಸ್ಥಳದಲ್ಲಿ 108 ತಟ್ಟೆಗಳನ್ನಿಟ್ಟು 108 ದಂಪತಿ ಪಾದಪೂಜೆ ಮಾಡಿದರು.

ಚಂದ್ರಪ್ರಭು ದಿಗಂಬರ ಜೈನ ಟ್ರಸ್ಟ್‌ ಚಾತುರ್ಮಾಸ ಸಮಿತಿ ಹಾಗೂ ವೀರಸೇವಾದಳದ ಸಂಯುಕ್ತಾಶ್ರಯದಲ್ಲಿ ನಡೆದ ಮಂಗಲಪ್ರವೇಶ ಕಾರ್ಯಕ್ರಮದಲ್ಲಿ ರುಯಿ ಹಾಗೂ ಚಿಕ್ಕೋಡಿಯ ಸಮಸ್ತ ಜಿನಭಕ್ತರಿಂದ ಚಿತ್ರ ಅನಾವರಣ, ಪುಷ್ಪವೃಷ್ಟಿ ನಡೆಯಿತು. ನಂತರ ಕಸಬಾ ಸಾಂಗಾವ, ಕಾರದಗಾ ಜಿನಭಕ್ತರು ದೀಪ ಪ್ರಜ್ವಲಿಸಿದರು. ವೀರಮಹಿಳಾ ಮಂಡಳದವರು ಪ್ರಾರ್ಥಿಸಿದರು. ಅಕ್ಕಾತಾಯಿ ಹಾಗೂ ಮಲ್ಲಪ್ಪ ಭಾಗಾಜೆ ದಂಪತಿಯಿಂದ ಮುನಿಗಳ ಪಾದಪೂಜೆ ನಡೆಯಿತು.

ಚಂದ್ರಪ್ರಭು ದಿಗಂಬರ ಜೈನ ಟ್ರಸ್ಟ್‌ ಅಧ್ಯಕ್ಷ ಮಹಾವೀರ ಪಾಟೀಲ ಸ್ವಾಗತಿಸಿದರು. ತ್ರಿಶಲಾದೇವಿ ಭಾಗಾಜೆ ನಿರೂಪಿಸಿದರು ಬಾಳಾಸಾಹೇಬ ನಾಡಗೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ