ಆ್ಯಪ್ನಗರ

ಬೆಳಗಾವಿ- ಧಾರವಾಡ ರೈಲು ಮಾರ್ಗ ಅಂತಿಮ ಸಮೀಕ್ಷೆಗೆ ಆದೇಶ

ಬೆಳಗಾವಿ: ಹಲವು ದಶಕಗಳ ಬೇಡಿಕೆಯಾದ ಬೆಳಗಾವಿ-ಧಾರವಾಡ ...

Vijaya Karnataka 23 Aug 2019, 5:00 am
ಬೆಳಗಾವಿ: ಹಲವು ದಶಕಗಳ ಬೇಡಿಕೆಯಾದ ಬೆಳಗಾವಿ-ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಈ ವರ್ಷವೇ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್‌) ಮಾಡುವಂತೆ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Vijaya Karnataka Web final survey of belgavi dharwad railway line ordered
ಬೆಳಗಾವಿ- ಧಾರವಾಡ ರೈಲು ಮಾರ್ಗ ಅಂತಿಮ ಸಮೀಕ್ಷೆಗೆ ಆದೇಶ


ಈಚೆಗೆ ಆಯೋಜಿಸಿದ್ದ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಅವರು ಈ ಕುರಿತು ಆದೇಶ ನೀಡಿದ್ದಾರೆ.

ರಾಜ್ಯ ಸರಕಾರದ ಸಹಕಾರದೊಂದಿಗೆ ಆದಷ್ಟು ಬೇಗ ಯೋಜನೆ ಅನುಷ್ಠಾನಗೊಳಿಸುವಂತೆಯೂ ಸಚಿವ ಸುರೇಶ ಅಂಗಡಿ ಸೂಚನೆ ನೀಡಿದ್ದಾರೆ.

ಈ ಯೋಜನೆ ಜಾರಿಗೊಂಡರೆ ಬೆಳಗಾವಿ- ಹಿರೇಬಾಗೇವಾಡಿ- ಕಿತ್ತೂರು ಹಾಗೂ ಧಾರವಾಡ ಹೈಕೋರ್ಟ್‌ ಮಾರ್ಗವಾಗಿ ನೇರ ರೈಲು ಮಾರ್ಗ ನಿರ್ಮಾಣವಾಗಲಿದೆ. ಅಲ್ಲದೇ ಈ ಮಾರ್ಗದಿಂದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಸೇರಿ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ರೈಲು ಸಂಚಾರ ಸಮಯ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಅಂತಿಮ ಸಮೀಕ್ಷೆ ಮುಂದಿನ ಎರಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ಮುಂದಿನ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ ಎಂದು ರಾಜ್ಯ ರೈಲ್ವೆ ಮಂತ್ರಾಲಯದ ನಿರ್ದೇಶಕ ಧನಂಜಯ ಸಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ