ಆ್ಯಪ್ನಗರ

ಯುವ ವಿಜ್ಞಾನಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು

ಆರ್ಥಿಕ ತೊಂದರೆಯಿಂದಾಗಿ ತೈವಾನ್‌ ವಿಶ್ವವಿದ್ಯಾಲದಯದಿಂದ ಬಂದಿರುವ ಪಿಎಚ್‌ಡಿ ಅವಕಾಶವನ್ನು ಕೈಚೆಲ್ಲುವ ಹಂತದಲ್ಲಿದ್ದ ಯುವ ವಿಜ್ಞಾನಿಗೆ ಇಲ್ಲಿಯ ಕೇದಾರ್‌ ಕ್ಲಿನಿಕ್‌ ಮಾಲಿಕರಾದ ಸರ್ನೋಬತ್‌ ದಂಪತಿ ಆರ್ಥಿಕ ನೆರವು ನೀಡಿದ್ದಾರೆ.

Vijaya Karnataka 18 Aug 2018, 5:00 am
ಬೆಳಗಾವಿ: ಆರ್ಥಿಕ ತೊಂದರೆಯಿಂದಾಗಿ ತೈವಾನ್‌ ವಿಶ್ವವಿದ್ಯಾಲದಯದಿಂದ ಬಂದಿರುವ ಪಿಎಚ್‌ಡಿ ಅವಕಾಶವನ್ನು ಕೈಚೆಲ್ಲುವ ಹಂತದಲ್ಲಿದ್ದ ಯುವ ವಿಜ್ಞಾನಿಗೆ ಇಲ್ಲಿಯ ಕೇದಾರ್‌ ಕ್ಲಿನಿಕ್‌ ಮಾಲಿಕರಾದ ಸರ್ನೋಬತ್‌ ದಂಪತಿ ಆರ್ಥಿಕ ನೆರವು ನೀಡಿದ್ದಾರೆ.
Vijaya Karnataka Web BLG-1708-2-52-17RAJU-1


ಬೆಳಗಾವಿ ಸಮೀಪದ ಅಂಬೇವಾಡಿ ಗ್ರಾಮದ ರೋಹನ್‌ ಪಾಸ್ತೆ ಅವರಿಗೆ ತೈವಾನ್‌ನ ನ್ಯಾಶನಲ್‌ ಚಿಯಾವೋ ಟಂಗ್‌ ವಿಶ್ವವಿದ್ಯಾಲಯ ಮಟೀರಿಯಲ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ತೀರಾ ಬಡ ಕುಟುಂಬದಿಂದ ಬಂದಿರುವ ರೋಹನ್‌ಗೆ ಈ ಅವಕಾಶ ಬಳಸಿಕೊಳ್ಳಲು ಆರ್ಥಿಕ ಸಮಸ್ಯೆ ಇತ್ತು. ಇದನ್ನು ಗಮನಿಸಿದ ಡಾ.ಸೋನಾಲಿ ಸರ್ನೋಬತ್‌ ಮತ್ತು ಡಾ.ಸಮೀರ್‌ ಸರ್ನೋಬತ್‌ ಗುರುವಾರ ಸಂಜೆ ಕೇದಾರಣ ಕ್ಲಿನಿಕ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ 50 ಸಾವಿರ ರೂ.ಗಳ ಚೆಕ್‌ ನೀಡಿದರು.

ಕೋಲ್ಲಾಪುರದ ಶಿವಾಜಿ ವಿವಿಯಿಂದ ನ್ಯಾನೋಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ಎಂಎಸ್‌ಸಿ ಪದವಿ ಪಡೆದಿರುವ ರೋಹನ್‌, ಸುರತ್ಕಲ್‌ನ ನ್ಯಾಶನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ರೀಸಚ್‌ ಪ್ರೊಜೆಕ್ಟ್ ಮಾಡಿದ್ದಾರೆ. ಪರ್ವೋಸ್ಕೈಟ್‌ ಮಟೀರಿಯಲ್‌ ಮತ್ತು ಪರ್ವೋಸ್ಕೈಟ್‌ ಸೋಲಾರ್‌ ಸೆಲ್ಸ್‌ ವಿಷಯದ ಮೇಲೆ ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಪ್ರಬಂಧ ಮಂಡಿಸಿದ್ದಾರೆ.

''ಆರ್ಥಿಕ ಸಮಸ್ಯೆಯಿಂದಾಗಿ ಯಾವುದೇ ವ್ಯಕ್ತಿ ಅವಕಾಶಗಳಿಂದ ವಂಚಿತರಾಗಬಾರದು. ಬೆಳಗಾವಿಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದರೂ ಬಡತನದಿಂದಾಗಿ ಅವರಿಗೆ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಅಂತವರಿಗೆ ನೆರವು ನೀಡಿದರೆ ಅವರು ಮುಂದೆ ಸನಮಾಜಕ್ಕೆ ದೊಡ್ಡ ಕೊಡುಗೆ ನೀಡಬಲ್ಲರು'' ಎಂದು ಡಾ.ಸೋನಾಲಿ ಸರ್ನೋಬತ್‌ ಈ ಸಂದರ್ಭದಲ್ಲಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ