ಆ್ಯಪ್ನಗರ

ಕಿಡಿಗೇಡಿಗಳಿಂದ ಬಣವೆಗೆ ಬೆಂಕಿ; ಅಪಾರ ಹಾನಿ

ನೇಸರಗಿ: ಸಮೀಪದ ಮುರಕೀಬಾವಿ, ಲಕ್ಕುಂಡಿ ಗ್ರಾಮದಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ನಷ್ಟವಾಗಿದೆ...

Vijaya Karnataka 22 Jun 2019, 5:00 am
ನೇಸರಗಿ : ಸಮೀಪದ ಮುರಕೀಬಾವಿ, ಲಕ್ಕುಂಡಿ ಗ್ರಾಮದಲ್ಲಿನ ಬಣವೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಅಪಾರ ನಷ್ಟವಾಗಿದೆ.
Vijaya Karnataka Web BEL-21NSG2


ಲಕ್ಕುಂಡಿ ಗ್ರಾಮದ ಚಂದ್ರಯ್ಯ ಪೂಜೇರಿ, ಶ್ರೀಶೈಲ ಕುಲಕರ್ಣಿ ಅವರಿಗೆ ಸೇರಿದ 2 ಸೋಯಾಬಿನ್‌ ಬಣವೆ ಸುಟ್ಟು ನಾಲ್ಕು ಲಕ್ಷ ರೂ. ಹಾಗೂ ರುದ್ರಪ್ಪ ಬೈಲವಾಡ ಅವರಿಗೆ ಸೇರಿದ ಬಣವೆ ಸುಟ್ಟು ಒಂದೂವರೆ ಲಕ್ಷ ರೂ. ನಷ್ಟವಾಗಿದೆ.

ಗ್ರಾಮದ ವ್ಯಕ್ತಿಯೋರ್ವ ದೇವಸ್ಥಾನಗಳಲ್ಲಿನ ಮೂರ್ತಿಗಳನ್ನು ಭಗ್ನಗೊಳಿಸುತ್ತಿದ್ದಾನೆ ಮತ್ತು ಸುತ್ತಮುತ್ತಲಿನ ಗ್ರಾಮಗಳ ಬಣವೆಗಳಿಗೆ ಬೆಂಕಿ ಹಚ್ಚಿ ಸುಡುತ್ತಿದ್ದಾನೆ ಎಂದು ಎಂದು ಆರೋಪಿಸಿ ಗ್ರಾಮಸ್ಥರು ನೇಸರಗಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಣವೆ ಸುಡುತ್ತಿರುವ ಕಿಡಿಗೇಡಿಯನ್ನು ತಕ್ಷಣ ಬಂಧಿಸಿ, ಕ್ರಮ ಕೈಗೊಳ್ಳುವಂತೆ ಶಾಸಕ ಮಹಾಂತೇಶ ದೊಡಗೌಡರ ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿದರು.

ಸ್ಥಳಕ್ಕೆ ತಹಸೀಲ್ದಾರ್‌ ಡಾ. ಡಿ.ಎಚ್‌. ಹೂಗಾರ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಹಾನಿಗೆ ಸಂಬಂಧಿಸಿದಂತೆ ಸರಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಉಪತಹಸೀಲ್ದಾರ ಬಸವರಾಜ ಹುಬ್ಬಳ್ಳಿ, ಕಂದಾಯ ನಿರೀಕ್ಷಕ ರಮೇಶ ಕೋಲಕಾರ, ಮುರಕೀಬಾವಿ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಕರಿಗಾರ, ಲಕ್ಕುಂಡಿ ಗ್ರಾಮ ಲೆಕ್ಕಾಧಿಕಾರಿ ಮಹಾಂತೇಶ ಕೋಣಿನವರ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ