ಓಮ್ನಿ ವಾಹನಕ್ಕೆ ಬೆಂಕಿ; 50ಸಾವಿರ ರೂ ಹಾನಿ
ಬೋರಗಾಂವ: ಸದಲಗಾ ಪಟ್ಟಣದಲ್ಲಿ ಓಮ್ನಿ ಕಾರ್ ಸ್ಟಾರ್ಟ್ ಮಾಡುವಾಗ ಸಿಲೆಂಡರ್ ಸ್ಫೋಟಗೊಂಡು ಇಡೀ ಕಾರು ಸುಟ್ಟು ಹೋಗಿದೆ...
Vijaya Karnataka 18 Jul 2019, 5:00 am
ಬೋರಗಾಂವ: ಸದಲಗಾ ಪಟ್ಟಣದಲ್ಲಿ ಓಮ್ನಿ ಕಾರ್ ಸ್ಟಾರ್ಟ್ ಮಾಡುವಾಗ ಸಿಲೆಂಡರ್ ಸ್ಫೋಟಗೊಂಡು ಇಡೀ ಕಾರು ಸುಟ್ಟು ಹೋಗಿದೆ.
ಸದಲಗಾ ಪಟ್ಟಣದ ಭಾಗಾಯಿ ದವಾಖಾನೆ ಬಳಿಯ ಶಾಮರಾವ ಪಾಟೀಲ ಎಂಬುವವರಿಗೆ ಸೇರಿದ ಓಮನಿ ಕಾರು ಸ್ಟಾರ್ಟ್ ಮಾಡುತ್ತಿದ್ದಂತೆ ಅದರಲ್ಲಿದ್ದ ಸಿಲೆಂಡರ್ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು.
ಇದನ್ನು ಕಂಡ ಶಾಮರಾವ ಪಾಟೀಲ ಭಯದಿಂದ ಕಾರು ಬಿಟ್ಟು ಹೊರಬಂದು ನೋಡುತ್ತಿದ್ದಂತೆ ಸಂಪೂರ್ಣ ಕಾರಿಗೆ ಬೆಂಕಿ ಆವರಿಸಿ ಸುಟ್ಟುಹೋಯಿತು. ಸದಲಗಾ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಿಂದ ಸುಮಾರು 50 ಸಾವಿರ ರೂ. ಹಾನಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.