ಆ್ಯಪ್ನಗರ

ರಾಜ್ಯ ಮಟ್ಟದ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ

ಉಗಾರ: ಉಗಾರದ ಡಾ ಶಿರಗಾಂವಕರ ಶಿಕ್ಷ ಣ ಸಂಸ್ಥೆಯ ಪಿಯು ವಾಣಿಜ್ಯ ವಿಭಾಗದ...

Vijaya Karnataka 18 Dec 2018, 5:00 am
ಉಗಾರ : ಉಗಾರದ ಡಾ. ಶಿರಗಾಂವಕರ ಶಿಕ್ಷ ಣ ಸಂಸ್ಥೆಯ ಪಿಯು ವಾಣಿಜ್ಯ ವಿಭಾಗದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅನಧಾ ಗಿರೀಶ ಕುಲಕರ್ಣಿ ರಾಜ್ಯ ಮಟ್ಟದ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
Vijaya Karnataka Web BEL-17 KAGWAD 1 NEWS PHOTO


ಸೋಮವಾರ ಅನಧಾ ಕುಲಕರ್ಣಿ ಅವರನ್ನು ಮಹಾವಿದ್ಯಾಲಯದಲ್ಲಿ ಸನ್ಮಾನಿಸಿ ಸಂಸ್ಥೆಯ ಆಧ್ಯಕ್ಷ ಚಂದನ ಶಿರಗಾಂವಕರ ಸನ್ಮಾನಿಸಿ, 21 ಸಾವಿರ ರೂ. ಬಹುಮಾನ ನೀಡಿದರು.

ಶನಿವಾರ ಬೆಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ನಾಲ್ಕು ವಿಭಾಗಗಳಿಂದ ತಲಾ 3 ವಿದ್ಯಾರ್ಥಿಗಳಂತೆ 12 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಅನಧಾ ಅವರು ''ಕೃಷ್ಣಾ ಓ ಎನದೆ ಬಾರೆಯ..'' ಎಂಬ ಭಕ್ತಿಗೀತೆ ಪ್ರಸ್ತುತಪಡಿಸಿದ್ದರು. ರಾಜ್ಯ ಮಟ್ಟದ ಪ್ರಥಮ ಸ್ಥಾನ ಪಡೆದಿದ್ದರಿಂದ ಕರ್ನಾಟಕ ಸರಕಾರದ ಪದವಿ ಪೂರ್ವ ವಿಭಾಗದ ನಿರ್ದೇಶಕರು ಪ್ರಶಸ್ತಿ ಪತ್ರ 12 ಸಾವಿರ ರೂ. ಬಹುಮಾನ ನೀಡಿ, ಸನ್ಮಾನಿಸಿದರು.

ಶಿರಗಾಂವಕರ ಶಿಕ್ಷ ಣ ಸಂಸ್ಥೆಯ ಸಂಚಾಲಕ ದೀಪಚಂದ ಶಹಾ, ಉಗಾರ ಶುಗರ್‌ ವರ್ಕ್ಸ್‌ ಕಂಪನಿಯ ಕಾರ್ಯದರ್ಶಿ ಎಂ.ಬಿ.ಕುಲಕರ್ಣಿ, ಪ್ರಾಚಾರ್ಯ ಪಿ.ಬಿ.ಕುಲಕರ್ಣಿ, ಸುರೇಶ ಸರದೇಸಾಯಿ, ಪ್ರಾಧ್ಯಾಪಕರಾದ ಅಣ್ಣಾಸಾಹೇಬ ಖಾಂಡೆ, ಪ್ರಮೋದ ಲಾಡ, ಎಸ್‌.ಬಿ.ಪಾಟೀಲ, ಎಲ್‌.ಆರ್‌.ಬಾಡಗೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ