ಆ್ಯಪ್ನಗರ

ಬೆಳಗಾವಿಯಿಂದ ಹೈದರಾಬಾದ್‌, ತಿರುಪತಿ ವಿಮಾನ ಸೇವೆ

ಬೆಳಗಾವಿ: ಮುಂದಿನ ತಿಂಗಳು ಬೆಳಗಾವಿಯಿಂದ ಹೈದರಾಬಾದ್‌, ತಿರುಪತಿ ವಿಮಾನ ಸಂಪರ್ಕ ...

Vijaya Karnataka 15 Sep 2019, 5:00 am
ಬೆಳಗಾವಿ: ಮುಂದಿನ ತಿಂಗಳು ಬೆಳಗಾವಿಯಿಂದ ಹೈದರಾಬಾದ್‌, ತಿರುಪತಿ ವಿಮಾನ ಸಂಪರ್ಕ ಆರಂಭವಾಗಲಿದ್ದು, ವರ್ಷಾಂತ್ಯದೊಳಗೆ ಬೆಳಗಾವಿಯಿಂದ 40 ವಿಮಾನಗಳು ಹಾರಾಟ ನಡೆಸಲಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ತಿಳಿಸಿದರು.
Vijaya Karnataka Web flights from belagavi to hyderabad and tirupati
ಬೆಳಗಾವಿಯಿಂದ ಹೈದರಾಬಾದ್‌, ತಿರುಪತಿ ವಿಮಾನ ಸೇವೆ


ಇಲ್ಲಿನ ಫೌಂಡ್ರಿಕ್ಲಸ್ಟರ್‌ ಸಭಾಭವನದಲ್ಲಿಶನಿವಾರ ವಾಣಿಜ್ಯೋದ್ಯಮ ಸಂಘ ಆಯೋಜಿಸಿದ್ದ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಅವರು ಮಾತನಾಡಿ, ಬೆಳಗಾವಿ- ನವದೆಹಲಿ ವಿಮಾನ ಸಂಪರ್ಕಕ್ಕೆ ಪ್ರಯಾಣಿಕರ ಬೇಡಿಕೆ ಇದೆ. ಮುಂದಿನ ತಿಂಗಳು ನವದೆಹಲಿಗೂ ವಿಮಾನ ಹಾರಾಟ ಶುರುವಾಗಲಿದೆ ಎಂದು ಹೇಳಿದರು.

ಸದ್ಯ ಬೆಳಗಾವಿಯಿಂದ ನಾಲ್ಕು ವಿಮಾನ ಸಂಸ್ಥೆಗಳಿಂದ 20 ವಿಮಾನಗಳು ಹಾರಾಟ ನಡೆಸುತ್ತಿವೆ. ಪ್ರತಿ ತಿಂಗಳು 21 ಸಾವಿರ ಜನರು ಪ್ರಯಾಣಿಸುತ್ತಿದ್ದಾರೆ. ಮುಂದಿನ ತಿಂಗಳಲ್ಲಿಟ್ರೂ ಜೆಟ್‌ ಕೂಡ ಹಾರಾಟ ಶುರು ಮಾಡಲಿದೆ. ಉಡಾನ್‌ 3ರಲ್ಲಿದೇಶದಲ್ಲೇ ಅತೀ ಹೆಚ್ಚು ರೂಟ್‌ ಪಡೆದ ಕೀರ್ತಿ ಬೆಳಗಾವಿಗೆ ಸಲ್ಲುತ್ತದೆ ಹೇಳಿದರು.

ರಾಜೇಶಕುಮಾರ ಮೌರ್ಯ ಅವರು ರಚಿಸಿರುವ ಚಿತ್ರಕಲೆಗಳನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ