ಆ್ಯಪ್ನಗರ

ಸೂರು ಕಲ್ಪಿಸುವವರೆಗೆ ಕಾಳಜಿಕೇಂದ್ರ ಬಿಡೆವು

ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ...

Vijaya Karnataka 14 Aug 2019, 5:00 am
ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ನಿರಾಶ್ರಿತರಾದವರಿಗೆ ತಾಲೂಕಿನಲ್ಲಿ ಆರಂಭಿಸಿದ ಸುಮಾರು 60 ಕಾಳಜಿ ಕೇಂದ್ರಗಳಲ್ಲಿ 25 ಸಾವಿರ ಜನರಿಗೆ ಆಶ್ರಯ ನೀಡಲಾಗಿದ್ದು, ಇವರಿಗೆ ರಾಜ್ಯದ ನಾನಾ ಜಿಲ್ಲೆಗಳಿಂದ ಹಲವು ಸಂಘಟನೆಗಳು, ಗ್ರಾಮಸ್ಥರು ನೆರವಿನ ಹಸ್ತ ಚಾಚುತ್ತಿದ್ದಾರೆ.
Vijaya Karnataka Web flood victims refuse to leave home till sanctioning houses
ಸೂರು ಕಲ್ಪಿಸುವವರೆಗೆ ಕಾಳಜಿಕೇಂದ್ರ ಬಿಡೆವು


ಸಂತ್ರಸ್ತರಿಗೆ ವಿವಿಧ ಸಾಮಗ್ರಿ ವಿತರಿಸುವ ವೇಳೆ ಕೆಲ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರು ಅತ್ಯಂತ ಶಾಂತರೀತಿಯಿಂದ ವರ್ತಿಸಿದರೆ ಕೆಲ ಕೇಂದ್ರಗಳಲ್ಲಿ ನೂಕಾಟ, ತಳ್ಳಾಟ ನಡೆಯುತ್ತಿದೆ. ಹಲವು ಕೇಂದ್ರಗಳಲ್ಲಿ ನಿರಾಶ್ರಿತರೇ ಅಡುಗೆ ಮಾಡುವವರಿಗೆ ಸಹಾಯ ಮಾಡುತ್ತಿದ್ದಾರೆ.

ಪಟ್ಟಣದ ಪುರಸಭೆಯ ಸಾಂಸ್ಕೃತಿಕ ಭವನದಲ್ಲಿರುವ ಕಾಳಜಿ ಕೇಂದ್ರದ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದವರೇ ವಹಿಸಿಕೊಂಡು ಉತ್ತಮ ವ್ಯವಸ್ಥೆ ಮಾಡುತ್ತಿದ್ದಾರೆ. ಶಾಲಾ, ಕಾಲೇಜುಗಳಿಗೆ ರಜೆ ಇದ್ದುದ್ದರಿಂದ ಅಲ್ಲಿರುವ ಮಕ್ಕಳು ಕಾಳಜಿ ಕೇಂದ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಸಂತ್ರಸ್ತರು ಮುಗಿಬಿದ್ದು, ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳುತ್ತಿದ್ದಾರೆ. ನಮಗೆ ತಾತ್ಕಾಲಿಕವಾಗಿ ಮನೆ ಯಾವಾಗ ಕಟ್ಟಿಸಿಕೊಡುತ್ತೀರಿ? ಪರಿಹಾರ ಯಾವಾಗ ನೀಡುತ್ತೀರಿ ಎಂದು ಹಲವಾರು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ.

''ಪ್ರವಾಹದಿಂದ ನಮ್ಮ ಮನೆ ಸಂಪೂರ್ಣ ಬಿದ್ದು ಹೋಗಿದೆ. ನಾವು ಎಲ್ಲಿ ಇರೋದು? ತಾತ್ಕಾಲಿಕ ತಗಡಿನ ಶೆಡ್‌ ಒದಗಿಸುವವರೆಗೂ ಕಾಳಜಿ ಕೇಂದ್ರಗಳನ್ನು ಬಿಟ್ಟು ಹೋಗುವುದಿಲ್ಲ'' ಎಂದು ನಿರಾಶ್ರಿತರು ಪಟ್ಟು ಹಿಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ