ಆ್ಯಪ್ನಗರ

ಬೆಳಗಾವಿಯಲ್ಲಿ 'ಫ್ಲೈಯಿಂಗ್‌ ಸ್ನೇಕ್‌' ರಕ್ಷಣೆ

ವಿಶೇಷವಾಗಿ ಹುಲ್ಲುಗಾವಲು ಮತ್ತು ಕಾಡು ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ 'ಹಾರುವ ಹಾವು' ಮಂಗಳವಾರ ಬೆಳಗಾವಿ ನಗರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ

Vijaya Karnataka 10 Jan 2018, 8:19 am

ಬೆಳಗಾವಿ: ವಿಶೇಷವಾಗಿ ಹುಲ್ಲುಗಾವಲು ಮತ್ತು ಕಾಡು ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ 'ಹಾರುವ ಹಾವು' ಮಂಗಳವಾರ ಬೆಳಗಾವಿ ನಗರದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Vijaya Karnataka Web flying snake protection
ಬೆಳಗಾವಿಯಲ್ಲಿ 'ಫ್ಲೈಯಿಂಗ್‌ ಸ್ನೇಕ್‌' ರಕ್ಷಣೆ


ಟಿಳವಾಡಿಯ ಅಜಯ ಚೌಗುಲೆ ಅವರ ಮನೆ ಪ್ರವೇಶಿಸಿದ್ದ 'ಫ್ಲೈಯಿಂಗ್‌ ಸ್ನೇಕ್‌' ಎಂದೇ ಕರೆಯಲ್ಪಡುವ ಈ ಹಾವನ್ನು ಉರಗಸ್ನೇಹಿ ನೀರ್ಝರಾ ಚಿಟ್ಟಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಆರು ತಿಂಗಳ ವಯಸ್ಸಿನ ಆಕರ್ಷಕ ಚಿತ್ತಾರ ಹೊಂದಿರುವ ಫ್ಲೈಯಿಂಗ್‌ ಸ್ನೇಕ್‌ 34 ಇಂಚು ಉದ್ದ ಹೊಂದಿದೆ.

ಇಂತಹ ಅಪರೂಪದ ಹಾವು ಉತ್ತರ ಗೋವಾ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇಂಥ ಅಪರೂಪದ ಜೀವಿಗಳು ಕಂಡು ಬಂದಾಗ ಸಾರ್ವಜನಿಕರು ಭಯಪಡದೆ ರಕ್ಷಿಸಲು ಮುಂದಾಗಬೇಕು ಎಂದು ನೀರ್ಝರಾ ಚಿಟ್ಟಿ ಸಲಹೆ ನೀಡಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ