ಆ್ಯಪ್ನಗರ

ಸುಖ ಸಂಪತ್ತನ್ನು ಮರೆತು ಶಾಶ್ವತ ಜ್ಞಾನ ಸಂಪತ್ತು ಗಳಿಸಿ

ಬೋರಗಾಂವ: ಚಾತುರ್ಮಾಸದಲ್ಲಿ ಸಮಸ್ತ ಶ್ರಾವಕ, ಶ್ರಾವಕಿಯರು ಜೀವನದ ಕ್ಷ ಣಿಕ ಸುಖ, ...

Vijaya Karnataka 9 Jul 2019, 5:00 am
ಬೋರಗಾಂವ : ಚಾತುರ್ಮಾಸದಲ್ಲಿ ಸಮಸ್ತ ಶ್ರಾವಕ, ಶ್ರಾವಕಿಯರು ಜೀವನದ ಕ್ಷ ಣಿಕ ಸುಖ, ಸಂಪತ್ತನ್ನು ಮರೆತು, ಶಾಶ್ವತ ಜ್ಞಾನ ಸಂಪತ್ತನ್ನು ಗಳಿಸಬೇಕು ಎಂದು 108 ಪ್ರಜ್ಞಾಸಾಗರ ಮುನಿಗಳು ಹೇಳಿದರು.
Vijaya Karnataka Web BEL-8ICH2


ಅವರು ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳ ಜನ್ಮಭೂಮಿ ಭೋಜ ಗ್ರಾಮದಲ್ಲಿ ಸೋಮವಾರ ಚಾತುರ್ಮಾಸ ಆಚರಣೆಗಾಗಿ ಮಂಗಲ ಪ್ರವೇಶ ಮಾಡಿ ಮಾತನಾಡಿದರು.

ಹುಟ್ಟಿದಾಗಿನಿಂದಲೂ ಕೇವಲ,ಆಸ್ತಿ,ಅಂತಸ್ತು, ಸಂಸಾರಕ್ಕಷ್ಟೇ ಸೀಮಿತವಾದ ಜೀವನದಲ್ಲಿ ಈ ನಾಲ್ಕು ತಿಂಗಳಾದರೂ ಜಿನೇಶ್ವರನ ಧ್ಯಾನ, ಜಪ, ತಪಗಳೊಂದಿಗೆ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಹೇಳಿದರು.

ಅಹಿಂಸೆ, ಅಪರಿಗ್ರಹ, ತ್ಯಾಗ, ಸಚ್ಚಾರಿತ್ರ್ಯದ ಮೂಲಮಂತ್ರ ಸಾರುವ ಜಿನ ಧರ್ಮದಲ್ಲಿ ಜನಿಸಿದ ಪ್ರತಿಯೊಬ್ಬ ಶ್ರಾವಕ, ಶ್ರಾವಕಿಯರು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕಾದರೆ, ದಾನ, ಪ್ರಸಾದ, ಪರೋಪಕಾರ ಸಾರಿದ ಜಿನೇಶ್ವರನ ಸಾನ್ನಿಧ್ಯದಲ್ಲಿ ಅತ್ಯಂತ ಪವಿತ್ರವಾದ ಚಾತುರ್ಮಾಸವನ್ನು ಭಕ್ತಿಪೂರ್ವಕ ಆಚರಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕೆಂದು ತಿಳಿಸಿದ ಮುನಿಗಳು ಈ ಚಾತುರ್ಮಾಸದಲ್ಲಿಯ ಅತ್ಯಂತ ಮಹತ್ವದ ದಿನವಾದ ಗುರುಪೂರ್ಣಿಮೆಯಂದು 108 ಆಚಾರ್ಯರ ಪೂಜೆ ನಡೆಯಲಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಕ್ಷ ುಲ್ಲಕ ಪೂಜ್ಯಸಾಗರ ಮುನಿಗಳೊಂದಿಗೆ ಬೇಡಕಿಹಾಳ ಮಾರ್ಗದಿಂದ ಬೆಳ್ಳಿ ರಥ, ಆನೆ, ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಜ್ಞಾನಸಾಗರ ಮುನಿಗಳನ್ನು ಧರ್ಮನಗರ ಭೋಜಗ್ರಾಮಕ್ಕೆ 5ಸಾವಿರ ಶ್ರಾವಕ, ಶ್ರಾವಕಿಯರ ಉಪಸ್ಥಿತಿಯಲ್ಲಿ ಮೆರವಣಿಗೆಯ ಮುಖಾಂತರ ಬರಮಾಡಿಕೊಳ್ಳಲಾಯಿತು.

ಮುನಿಗಳ ಪ್ರವೇಶದ ವೇಳೆಗೆ ಗ್ರಾಮದ ಪ್ರತಿ ಮನೆಯಂಗಳದಲ್ಲಿ ರಂಗೋಲಿ ಹಾಕಿ ಧರ್ಮಧ್ವಜ, ಹಾರಿಸುವುದರೊಂದಿಗೆ ಮುನಿಗಳ ಪಾದಪೂಜೆ ಮಾಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಿಂದ ಹೊರಟ ಮೆರವಣಿಗೆ ಆಚಾರ್ಯ ಶಾಂತಿಸಾಗರ ಮುನಿಗಳ ಶಾಂತಿ ತೀರ್ಥಕ್ಕೆ ಆಗಮಿಸುತ್ತಿದ್ದಂತೆ ಸುಮಾರು 1008ಅಡಿಗಳ ದಾರಿಯಲ್ಲಿ 108 ತಟ್ಟೆಗಳಲ್ಲಿ ಎದುರುಬದುರಾಗಿ 108 ಜೋಡಿ ಮುತ್ತೈದೆಯರು ಪಾದಪೂಜೆ ಮಾಡಿದರು.

ಭಕ್ತರಿಂದ ಪುಷ್ಪವೃಷ್ಟಿಯೊಂದಿಗೆ ಶಾಂತಿತೀರ್ಥಕ್ಕೆ ಮುನಿಗಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಘೋಷಣೆ, ಭಗವಾನ ಮಹಾವೀರರ ತತ್ವಗಳ ಪಠಣದೊಂದಿಗೆ ಶಾಂತಿತೀರ್ಥ ವೇದಿಕೆಯಲ್ಲಿ ಪ್ರವೇಶಿಸಿದ ಮುನಿಗಳು ನೆರೆದಿದ್ದ ಸಮಸ್ತ ಶ್ರಾವಕ ಶ್ರಾವಕಿಯರಿಗೆ ಪ್ರವಚನದ ಮುಖಾಂತರ ಹಿತೋಪದೇಶ ಮಾಡಿ ಚಾತುರ್ಮಾಸದ ಮಹತ್ವ ತಿಳಿಸಿದರು.

ಶೈಲಜಾ ಮಗದುಮ್ಮ ಹಾಗೂ ಸಂಗಡಿಗರಿಂದ ಮಂಗಲಾಚರಣ ನಡೆಯಿತು. ಧಾರ್ಮಿಕ ಸಮಾರಂಭದಲ್ಲಿ ಅದಗೌಡಾ ಪಾಟೀಲ, ಅಪ್ಪಾಸಾಬ ಪಾಟೀಲ, ತಾತ್ಯಾಸಾಬ ಪಾಟೀಲ, ಓಂ.ಪಾಟಣಿ, ಮುಕೇಶ ಗಂಗವಾಲ, ಅಂಕೇಶಜಿ ಜೈನ, ಕಪೂರಚಂದ್‌ ಸೋನಿ, ಪಾರಸಜೀ ರಾಂಕಾ, ರಾಜೇಂದ್ರ ಸೋಗಾನೆ, ಭರತ ಬೇಡಕಿಹಾಳೆಯವರನ್ನು ಚಾತುರ್ಮಾಸ ಕಮಿಟಿಯಿಂದ ಸನ್ಮಾನಿಸಲಾಯಿತು. ದೀಪಾಲಿ ಚೌಗಲೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಸಚಿನ್‌ ಕೇಸ್ತೆ ಸ್ವಾಗತಿಸಿದರು. ಅಪ್ಪಾಸಾಬ ಪಾಟೀಲ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ