ಆ್ಯಪ್ನಗರ

ಪಾಕ್‌ ವಿರುದ್ಧದ ಯುದ್ಧಕ್ಕೆ ಮಾಜಿ ಸೈನಿಕರು ಸಿದ್ಧ

ಬೈಲಹೊಂಗಲ: ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾದಲ್ಲಿ ಪಾಕಿಸ್ತಾನವನ್ನು ಸೆದೆಬಡಿಯಲು ಮತ್ತೆ ಭಾರತ ಸೇನೆಗೆ ಸೇರಿ ಯುದ್ಧ ಮಾಡಲು ಸಿದ್ಧರಿದ್ದೇವೆ ಎಂದು ...

Vijaya Karnataka 18 Feb 2019, 5:00 am
ಬೈಲಹೊಂಗಲ : ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆಯಾದಲ್ಲಿ ಪಾಕಿಸ್ತಾನವನ್ನು ಸೆದೆಬಡಿಯಲು ಮತ್ತೆ ಭಾರತ ಸೇನೆಗೆ ಸೇರಿ ಯುದ್ಧ ಮಾಡಲು ಸಿದ್ಧರಿದ್ದೇವೆ ಎಂದು ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ ಗುರವನ್ನವರ ಹೇಳಿದರು.
Vijaya Karnataka Web BEL-17HTP2


ಅವರು ಸ್ಥಳೀಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹುತಾತ್ಮ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಮುಂಬತ್ತಿ ಸಮೇತ ಮಾಜಿ ಸೈನಿಕರು ಕೈಗೊಂಡ ಪಾದಯಾತ್ರೆ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧಕ್ಕೆ ಪ್ರತಿಜ್ಞೆ ಮಾಡಿ 'ಯುದ್ಧಕ್ಕೆ ನಮ್ಮನ್ನು ಆಹ್ವಾನಿಸಿ' ಎಂದು ಸೇನಾಧಿಕಾರಿಗಳಲ್ಲಿ ಮನವಿ ಮಾಡಿದರು.

ಪಾದಯಾತ್ರೆಯುದ್ದಕ್ಕೂ ಉಗ್ರರ ಅಟ್ಟಹಾಸ, ಪಾಕಿಸ್ತಾನದ ಕುಕೃತ್ಯದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸೈನಿಕರಾದ ಗಂಗಪ್ಪ ಗುಗ್ಗರಿ, ಶಿವಾನಂದ ಹಂಚಿನಮನಿ, ಶಶಿಧರ ಮೂಗಿ, ಆನಂದ ಹಿರೇಮಠ ಮಾತನಾಡಿ, ಪಾಕಿಸ್ತಾನದ ಹೇಯ ಕೃತ್ಯ ಸದೆ ಬಡಿಯಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದ್ದನ್ನು ಶ್ಲಾಘಿಸಿದರು.

ಮಿಡನಕಟ್ಟಿಯ ಮಾಜಿ ಸೇನಾನಿ ಬಸವಣ್ಣೆಪ್ಪ ಕಾರ್ಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಸವಣ್ಣೆಪ್ಪ ಬೋಗೂರ, ಬಸವಂತಪ್ಪ ಮಡಿವಾಳರ, ಎಸ್‌.ಎಂ. ಪಟ್ಟಿಹಾಳ, ಬಸವರಾಜ ಇಟಗಿ, ಎಸ್‌.ವಿ. ನಾಗನೂರ, ಜಿ.ಬಿ. ಹಿರೇಮಠ, ಉಳವಪ್ಪ ಮಠದ, ಟಿ.ಜಿ. ಲೋಕರೆ, ಮಹಾದೇವ ತಿಗಡಿ, ಎಂ.ಎಂ. ಬೆಂಡಿಗೇರಿ, ಮಲ್ಲಿಕಾರ್ಜುನ ಉಪ್ಪಿನ, ಕೆ.ಎನ್‌. ಪಾಟೀಲ, ವೆಂಕಣ್ಣ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ