ಆ್ಯಪ್ನಗರ

ಮಾರ್ಚ್ ವೇಳೆಗೆ ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಮುಕ್ತಿ

-ಶಿಕ್ಷಕರ ಸ್ನೇಹಿ ವರ್ಗಾವಣೆ ನಿಯಮ ಜಾರಿಗೆ ಸಿಎಂ ಒಪ್ಪಿಗೆ -ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್‌...

Vijaya Karnataka 23 Sep 2019, 5:00 am
ಬೆಳಗಾವಿ: ''ಮುಂಬರುವ ಚಳಿಗಾಲದ ಅಧಿವೇಶನದಲ್ಲಿಶಿಕ್ಷಕರ ಸ್ನೇಹಿ ವರ್ಗಾವಣೆ ನಿಯಮಗಳನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದು, ಮುಂದಿನ ಮಾರ್ಚ್ ಒಳಗೆ ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಯಲಿದೆ'' ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.
Vijaya Karnataka Web 22 LBS 1A_53


ನಗರದ ಗಾಂಧಿ ಭವನದಲ್ಲಿಭಾನುವಾರ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭದಲ್ಲಿಅವರು ಮಾತನಾಡಿದರು. ''ಶಿಕ್ಷಕರ ವರ್ಗಾವಣೆಯಲ್ಲಿಹಲವು ತಪ್ಪುಗಳಾಗಿದ್ದು, ತಿದ್ದುಪಡಿ ತರಲಾಗುತ್ತಿದೆ. ಈಗಾಗಲೇ ವರ್ಗಾವಣೆಯಾಗಿರುವ ಶಿಕ್ಷಕರು ಸಹ ಅರ್ಜಿ ಸಲ್ಲಿಸಬಹುದು. ಕೆಲ ತಪ್ಪುಗಳಿಂದ ಆಗಿರುವ ಸಮಸ್ಯೆಗಳನ್ನು ಸರಿಪಡಿಸಲಾಗುವುದು. ಅಧಿಕಾರಿಗಳು ಎಸಿ ಕೊಠಡಿಯಲ್ಲಿಕುರಿತು ಆದೇಶ ಮಾಡದೆ ಸ್ಥಳೀಯ ಮಟ್ಟದಲ್ಲಿಸಮಸ್ಯೆ ಅರ್ಥ ಮಾಡಿಕೊಳ್ಳಬೇಕು'' ಎಂದರು.

ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಪಾಟೀಲ ಮಾತನಾಡಿ, ''11ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಹಮ್ಮಿಕೊಂಡಿದ್ದು, ಸರಕಾರಿ ನೌಕರರ ಪ್ರತಿಭಾವಂತ 162 ಮಕ್ಕಳಿಗೆ ಪುರಸ್ಕಾರ ನೀಡಲಾಗುತ್ತಿದೆ. ಇದರಲ್ಲಿ10 ಜನ ಬಡರೈತರ ಮಕ್ಕಳು ಇದ್ದಾರೆ'' ಎಂದರು. ''ಬೆಂಗಳೂರು ಹೊರತುಪಡಿಸಿ ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು, ಇಲ್ಲಿಸರಕಾರಿ ನೌಕರರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಸರಕಾರದಿಂದ 1ಎಕರೆ ಭೂಮಿ ಕೊಡಿಸಬೇಕು'' ಎಂದು ಸಂಘದ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿ.ಎಸ್‌. ಷಡಾಕ್ಷರಿ, ''1 ಎಕರೆ ಸಾಕಾಗುವುದಿಲ್ಲ. 2 ಎಕರೆ ಭೂಮಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು'' ಎಂದು ಭರವಸೆ ನೀಡಿದರು.

ಖಾಲಿ ಹುದ್ದೆ ಭರ್ತಿ ಮಾಡಿ: ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಜಿ. ಜಗದೀಶ ಮಾತನಾಡಿ, ''ರಾಜ್ಯದಲ್ಲಿ1.20 ಲಕ್ಷ ಹುದ್ದೆಗಳು ಖಾಲಿ ಇದ್ದು, ಕೂಡಲೇ ಎಲ್ಲಹುದ್ದೆಗಳನ್ನು ಭರ್ತಿ ಮಾಡುವಂತೆ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ'' ಎಂದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಪದಾಧಿಕಾರಿಗಳು ಪದಗ್ರಹಣ ಮಾಡಿದರು. ಬಳಿಕ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ರಾಜ್ಯ ಪದಾಧಿಕಾರಿಗಳಾದ ಆರ್‌. ಶ್ರೀನಿವಾಸ, ವಿ.ವಿ. ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶೆಡಶ್ಯಾಳ, ಬಸವರಾಜ, ಶ್ರೀನಿವಾಸ, ರುದ್ರಪ್ಪ, ಹೇಮಲತಾ ಎಚ್‌.ಎಸ್‌., ರೋಷಣಿ, ಮುರುಗೇಂದ್ರ ಉಪ್ಪಿನ, ಶಂಕರ ಗೋಕಾವಿ, ರುದ್ರಪ್ಪ ಬಸಗುಪ್ಪಿ, ಲಗಮಣ್ಣಾ ಪಂಗಣ್ಣವರ, ಶ್ರವಣ ರಾಣವ್ವಗೋಳ, ಆನಂದ ಹೊಂಗಲ, ರಮೇಶ ಹುಲಗೂರ, ಶಂಕರ ಹೊಸೂರ, ನೀಲಕಂಠ, ಕಪ್ಪಲಗುದ್ದಿ, ನವೀನ ಗಂಗರೆಡ್ಡಿ, ಅನಂತ ಪಪ್ಪು ಮೊದಲಾದವರು ಉಪಸ್ಥಿತರಿದ್ದರು.

ಸುಸಜ್ಜಿತ ಭವನ ನಿರ್ಮಾಣ:
''ರಾಜ್ಯ ಸರಕಾರಿ ನೌಕರರ ಸಂಘ 2020ಕ್ಕೆ ನೂರು ವರ್ಷ ಪೂರೈಸಲಿದ್ದು, ಶತಮಾನೋತ್ಸವ ಆಚರಿಸಲು ಸರಕಾರ 8 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದೆ. ಜತೆಗೆ ಬೆಂಗಳೂರಿನಲ್ಲಿಶತಮಾನೋತ್ಸವದ ನೆನಪಿಗಾಗಿ 3 ಎಕರೆ ಜಾಗದಲ್ಲಿಭವನ ನಿರ್ಮಿಸಲಾಗುವುದು. ಇದರಲ್ಲಿಹೈಟೆಕ್‌ ಕೊಠಡಿಗಳು, ಕ್ಲಬ್‌, ರೆಸ್ಟೋರೆಂಟ್‌, ನೌಕರರಿಗೆ ಉಳಿದುಕೊಳ್ಳಲು ವ್ಯವಸ್ಥೆ ಹೊಂದಿರುವ ಸುಸಜ್ಜಿತ ಭವನ ನಿರ್ಮಿಸಲಾಗುವುದು'' ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ತಿಳಿಸಿದರು.

ಇದೇ ಮೊದಲ ಬಾರಿಗೆ ನಡೆಯುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮವನ್ನು ಚಿತ್ರದುರ್ಗದಲ್ಲಿಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
-ಜಗದೀಶ ಪಾಟೀಲ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.

ಬೆಳಗಾವಿಯಲ್ಲಿಸರಕಾರಿ ನೌಕರರಿಗೆ ರಾಜ್ಯ ಮಟ್ಟದ ಕ್ರೀಡಾಕೂಟ ಹಮ್ಮಿಕೊಂಡು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಂದ ಉದ್ಘಾಟನೆ ಮಾಡಿಸಲಾಗುವುದು.
-ಸಿ.ಎಸ್‌. ಷಡಾಕ್ಷರಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ