ಆ್ಯಪ್ನಗರ

ಗಡಿ ಭಾಗದ ಚೆಕ್‌ಪೋಸ್ಟ್‌ ಬಳಿಯೇ ಅಂತ್ಯಸಂಸ್ಕಾರ

ನಿಪ್ಪಾಣಿ: ಮಹಾರಾಷ್ಟ್ರದಲ್ಲಿಸಂಭವಿಸಿದ ಅಪಘಾತದಲ್ಲಿ ...

Vijaya Karnataka 29 May 2020, 5:00 am
ನಿಪ್ಪಾಣಿ: ಮಹಾರಾಷ್ಟ್ರದಲ್ಲಿಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದ ರಾಜ್ಯದ ವ್ಯಕ್ತಿಯೊಬ್ಬರ ಶವವನ್ನು ಸ್ವಗ್ರಾಮಕ್ಕೆ ಸಾಗಿಸಲು ಅನುಮತಿ ಸಿಗದೇ ಇರುವುದರಿಂದ ಗಡಿ ಭಾಗದ ಕೊಗನೊಳಿಯ ಚೆಕ್‌ಪೋಸ್ಟ್‌ ಸಮೀಪದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
Vijaya Karnataka Web funeral near the border checkpoint
ಗಡಿ ಭಾಗದ ಚೆಕ್‌ಪೋಸ್ಟ್‌ ಬಳಿಯೇ ಅಂತ್ಯಸಂಸ್ಕಾರ


ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಲಿಂಗರಾಜ ಬಸವಪ್ರಭು ಬೆಳಗಾವಿ (53)ಅವರು ಮುಂಬಯಿಯ ಎಲ್‌ ಆ್ಯಂಡ್‌ ಟಿ ಕಂಪನಿಯಲ್ಲಿಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಠಾಣೆ ಬಳಿ ಸಂಭವಿಸಿದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

ಈ ಹಿನ್ನೆಲೆಯಲ್ಲಿಅವರ ಸಂಬಂಧಿಕರು ಪಾರ್ಥಿವ ಶರೀರವನ್ನು ಸ್ವಗ್ರಾಮ ಬೈಲಹೊಂಗಲಕ್ಕೆ ಒಯ್ಯಲು ಅಲ್ಲಿನ ಅಧಿಕಾರಿಗಳಿಂದ ಅನುಮತಿ ಪಡೆದಿದ್ದರು. ಅದರಂತೆ ಗುರುವಾರ ಬೆಳಗ್ಗೆ 9 ಗಂಟೆಗೆ ನಿಪ್ಪಾಣಿ ಬಳಿಯ ಕೊಗನೊಳಿಯ ಚೆಕ್‌ಪೋಸ್ಟ್‌ಗೆ ಬಂದಾಗ, ಕೊರೊನಾ ಸೋಂಕಿನ ಭೀತಿಯಿಂದ ಅಧಿಕಾರಿಗಳು ಪಾರ್ಥಿವ ಶರೀರವನ್ನು ಊರಿಗೆ ಸಾಗಿಸಲು ಅವಕಾಶ ಇಲ್ಲಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿದೂಧಗಂಗಾ ನದಿ ತೀರದ ಬಳಿಯೇ ಲಿಂಗರಾಜ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಲಿಂಗರಾಜರ ಅವರ ಪತ್ನಿ ಸುಜಾತಾ, ಪುತ್ರ ಹಾಗೂ ಪುತ್ರಿ, ತಂದೆ, ಸಂಬಂಧಿಕರು ಹಾಗೂ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

ಕೆಲ ದಿನಗಳ ಹಿಂದೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವ್ಯಕ್ತಿಯೊಬ್ಬರು ಮುಂಬಯಿಯಲ್ಲಿಹೃದಯಾಘಾತದಿಂದ ನಿಧನರಾಗಿದ್ದರು. ಅಂದು ಕೂಡ ವ್ಯಕ್ತಿಯ ಶವವನ್ನು ಸ್ವಗ್ರಾಮಕ್ಕೆ ಒಯ್ಯಲು ಅವಕಾಶ ನಿರಾಕರಿಸಿದ್ದರಿಂದ ಚೆಕ್‌ಪೋಸ್ಟ್‌ ಬಳಿ ನದಿ ತೀರದಲ್ಲಿಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ