ಆ್ಯಪ್ನಗರ

ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ಬೀಡಿ/ಖಾನಾಪುರ ಮಿದುಳಿನ ರಕ್ತಸ್ರಾವದಿಂದಾಗಿ ತಮಿಳುನಾಡಿನ ...

Vijaya Karnataka 4 Dec 2018, 5:00 am
ಬೀಡಿ/ಖಾನಾಪುರ : ಮಿದುಳಿನ ರಕ್ತಸ್ರಾವದಿಂದಾಗಿ ತಮಿಳುನಾಡಿನ ವಿಶಾಖಪಟ್ಟಣಂ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟ ತಾಲೂಕಿನ ಹಲಸಿ ಗ್ರಾಮದ ಭಾರತೀಯ ಸೇನೆಯ ಯೋಧ ಸತೀಶ ಕೃಷ್ಣ ಗುರವ (28) ಅವರ ಅಂತ್ಯಕ್ರಿಯೆ ಹುಟ್ಟೂರು ಹಲಸಿಯಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ನಡೆಯಿತು.
Vijaya Karnataka Web BEL-3KHANAPUR3


ಸತೀಶ ಅವರ ಅಕಾಲಿಕ ಮರಣಕ್ಕೆ ಕುಟುಂಬದ ಸದಸ್ಯರು, ಗ್ರಾಮಸ್ಥರು, ಸ್ನೇಹಿತರು ಮತ್ತು ಬಂಧುಗಳು ಕಂಬನಿ ಮಿಡಿದರು. ಹಲಸಿ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ಭಾರತೀಯ ಸೇನೆ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಯೋಧನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸತೀಶ ಅವರ ಹೆತ್ತವರು, ಪತ್ನಿ ಮತ್ತು ಸಂಬಂಧಿಗಳ ರೋದನ ಮುಗಿಲು ಮುಟ್ಟಿತ್ತು.

ಸತೀಶ ಅವರ ಪಾರ್ಥೀವ ಶರೀರವನ್ನು ಸೋಮವಾರ ಬೆಳಗ್ಗೆ ಭಾರತೀಯ ಸೇನೆಯ ವಿಶೇಷ ವಾಹನದಲ್ಲಿ ಹಲಸಿ ಗ್ರಾಮಕ್ಕೆ ತರಲಾಯಿತು. ಕೆಲಕಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇರಿಸಿ ಸಾರ್ವಜನಿಕರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಯಿತು. ಬಳಿಕ ಅವರ ಮನೆಗೆ ಒಯ್ದು ಧಾರ್ಮಿಕ ವಿಧಿಗಳನ್ನು ಪೂರೈಸಲಾಯಿತು. ನಂತರ ಗ್ರಾಮದ ಹೊರವಲಯದ ರುದ್ರಭೂಮಿಯಲ್ಲಿ ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಅಗಲಿದ ಯೋಧನಿಗೆ ಗೌರವ ಸಲ್ಲಿಸಿದರು. ಭಾರತೀಯ ಸೈನ್ಯದ ಅಧಿಕಾರಿಗಳು ಗೌರವ ಅರ್ಪಿಸಿ ಪಥ ಸಂಚಲನ ನಡೆಸಿದರು. ಬಳಿಕ ಹಿಂದೂ ಧರ್ಮದ ಪದ್ಧತಿಯಂತೆ ಅಂತ್ಯಕ್ರಿಯೆ ನಡೆಸಲಾಯಿತು.

ತಹಸೀಲ್ದಾರ ಶಿವಾನಂದ ಉಳ್ಳೇಗಡ್ಡಿ, ಸಿಪಿಐ ಪಿ.ಮೋತಿಲಾಲ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ಮುಖಂಡ ವಿಠ್ಠಲ ಹಲಗೇಕರ, ಹಲಸಿ ಗ್ರಾಪಂ ಅಧ್ಯಕ್ಷ ಆರ್‌.ಡಿ ಹಂಜಿ, ಪಿಡಿಒ ಎಂ.ಎ ಇನಾಮದಾರ, ಸುಧೀರ ಗಂಭೀರ, ಸಂತೋಷ ಹಂಜಿ, ರಾಜಾರಾಮ ಪೇಡಣೆಕರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ