ಆ್ಯಪ್ನಗರ

ಆಸ್ತಿ ಸಕ್ರಮಕ್ಕೆ ಆಗ್ರಹಿಸಿ ಗಾಯರಾಣ ನಿವಾಸಿಗಳಿಂದ ಕಂಕಣವಾಡಿ ಪಟ್ಟಣ ಪಂಚಾಯಿತಿ ಎದುರು ಬೃಹತ್‌ ಪ್ರತಿಭಟನೆ

ರಾಯಬಾಗ: ಸರಕಾರಿ ಗಾಯರಾಣ ಜಾಗದಲ್ಲಿ ವಾಸಿಸುತ್ತಿರುವ ...

Vijaya Karnataka 26 Jun 2020, 5:00 am
ರಾಯಬಾಗ: ಸರಕಾರಿ ಗಾಯರಾಣ ಜಾಗದಲ್ಲಿವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಆಸ್ತಿಗಳ ಸಕ್ರಮಕ್ಕೆ ಆಗ್ರಹಿಸಿ ಗುರುವಾರ ಕಂಕಣವಾಡಿ ಪಟ್ಟಣ ಪಂಚಾಯಿತಿ ಎದುರು ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಚಂದ್ರಕಾಂತ ಭಜಂತ್ರಿಯವರಿಗೆ ಮನವಿ ಸಲ್ಲಿಸಿದರು.
Vijaya Karnataka Web 25RAIBAG1PHOTO1_53
ರಾಯಬಾಗ ತಾಲೂಕಿನ ಕಂಕಣವಾಡಿ ಗಾಯರಾಣ ಜಾಗದಲ್ಲಿವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಆಸ್ತಿಗಳ ಸಕ್ರಮಕ್ಕೆ ಆಗ್ರಹಿಸಿ ಪಪಂ ಕಾರ್ಯಾಲಯದೆದುರು ಬೃಹತ್‌ ಪ್ರತಿಭಟನೆ ನಡೆಸಿದರು


ಕಂಕಣವಾಡಿ ಪಪಂ ವ್ಯಾಪ್ತಿಯ ಸರಕಾರಿ ಗಾಯರಾಣ ಜಮೀನಿನಲ್ಲಿ40 ವರ್ಷಗಳಿಂದ ಜನರು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಅಂದಿನ ಗ್ರಾಪಂನಿಂದ ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿರ್ಮಿಸಿಕೊಂಡಿದ್ದಾರೆ. ಇಲ್ಲಿ871 ಮನೆಗಳಿದ್ದು ಗ್ರಾಪಂ ಅವಧಿಯಲ್ಲಿನಂ.9 ರಲ್ಲಿಠರಾವು ಮುಖಾಂತರ ಆಸ್ತಿಗಳನ್ನು ನೋಂದಣಿ ಕೂಡ ಮಾಡಲಾಗಿದೆ. ಈಗಿನ ಪಪಂನವರು ಇಲ್ಲಿಎಲ್ಲಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಈ ಕೂಡಲೇ ಈ ಆಸ್ತಿಗಳನ್ನು ಸಕ್ರಮಗೊಳಿಸಬೇಕು ಎಂದು ಮನವಿಯಲ್ಲಿಆಗ್ರಹಿಸಲಾಗಿದೆ.

ಸ್ಥಳಕ್ಕೆ ತಹಸೀಲ್ದಾರ್‌ ಚಂದ್ರಕಾಂತ ಭಜಂತ್ರಿ ಆಗಮಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಅರ್ಜುನ ನಾಯಿಕವಾಡಿ, ಅಣ್ಣಾಸಾಹೇಬ ದೇಸಾಯಿ, ಕೃಷ್ಣರಾವ ದೇಸಾಯಿ, ಮಹಾದೇವ ಗದಾಡಿ, ಪ್ರಕಾಶ ಹುಕ್ಕೇರಿ, ಗೋಪಾಲ ಪೂಜಾರಿ, ಬಾಳಪ್ಪ ಅರಭಾಂವಿ, ಹಾಲಪ್ಪ ಹುಕ್ಕೇರಿ, ರಾಮಪ್ಪ ಬೆಳಗಲಿ, ತಮ್ಮಣ್ಣಾ ನಾಯಿಕವಾಡಿ, ಲಕ್ಷತ್ರ್ಮಣ ಮಚ್ಚನ್ನವರ, ಹಾಲಪ್ಪ ಸುರನ್ನವರ, ವಿಠ್ಠಲ ಹುಕ್ಕೇರಿ, ಸುರೇಶ ನಾಯಿಕವಾಡಿ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ