ಆ್ಯಪ್ನಗರ

ಯಮಕನಮರಡಿ: 12 ಕಡೆ ಮನೆಗಳ್ಳತನ ಮಾಡಿದ್ದ ತಂಡ ಅಂದರ್‌

ಬಂಧಿತರಿಂದ 17.24 ಲಕ್ಷ ರೂ.ಮೌಲ್ಯದ 361.5 ಗ್ರಾಂ ಚಿನ್ನಾಭರಣ, 55,421 ರೂ.ಮೌಲ್ಯದ 785 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ಕಳ್ಳತನಕ್ಕೆ ಬಳಸಿದ 80 ಸಾವಿರ ರೂ.ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ

Vijaya Karnataka Web 27 Feb 2021, 8:17 pm
ಯಮಕನಮರಡಿ: ಜಿಲ್ಲೆಯ 12 ಕಡೆ ಮನೆಗಳ್ಳತನ ಮಾಡಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣದ ದೋಚಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಪೊಲೀಸ್‌
ಪೊಲೀಸ್‌


ಗೋಕಾಕ ತಾಲೂಕಿನ ಅರಬಾವಿ ಗ್ರಾಮದ ಸಂತೋಷ ಗಂಗಾರಾಮ ವಡ್ಡರ (46), ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಜವಾಹರ ನಗರದ ವಿಶಾಲ ನರಸಿಂಗ ಶೆರಖಾನೆ ಎನ್ನುವವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಯಮಕನಮರಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರು ಫೆ.19 ರಂದು ಜಿನರಾಳ ಕ್ರಾಸ್‌ ಬಳಿ ಅನುಮಾನಾಸ್ಪದವಾಗಿ ಸಿಕ್ಕ ಸಂತೋಷ ವಡ್ಡರ ಎಂಬಾತನನ್ನು ಬಂಧಿಸಿದ್ದರು. ಈತನ ವಿಚಾರಣೆ ನಡೆಸಿದಾಗ ಸಂತೋಷ ತನ್ನ ಸ್ನೇಹಿತ ಕೊಲ್ಲಾಪುರದ ವಿಶಾಲ ಶೆರಖಾನೆ ಜತೆಗೂಡಿ ಚನ್ನಮ್ಮನ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಮತ್ತು ಬೆಳಗಾವಿ ತಾಲೂಕಿನ ಮಾರಿಹಾಳ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2 ಮನೆ, ಒಂದು ದೇವಸ್ಥಾನ, ಬೆಳಗಾವಿ ನಗರದ ಮಾಳಮಾರುತಿ ಠಾಣೆ ವ್ಯಾಪ್ತಿಯಲ್ಲಿ 5 ಮನೆ, ಗೋಕಾಕ್‌ ಪಟ್ಟಣದಲ್ಲಿ 1 ಹಾಗೂ ಯಮಕನಮರಡಿ ಠಾಣೆ ವ್ಯಾಪ್ತಿಯ ಪಾಶ್ಚಾಪುರ ಗ್ರಾಮದಲ್ಲಿನ ಒಂದು ಮನೆ ಸೇರಿದಂತೆ ಒಟ್ಟು 12 ಮನೆಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ.

ಅಲ್ಲದೆ ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ಕೊಲ್ಲಾಪುರದ ಸಂಭಾಜಿ ನಗರದ ಗಿರೀಶ ಚಂದ್ರಕಾಂತ ಪೋತದಾರನಿಗೆ ಮಾರಾಟ ಮಾಡಿದ್ದಾನೆ. ಸಂತೋಷ ವಡ್ಡರ ಮತ್ತು ಗಿರೀಶ ಪೋತದಾರ ಇಬ್ಬರನ್ನೂ ಪೊಲೀಸರು ಬಂಧಿಸಿ ಮೊಬೈಲ್‌ ಮತ್ತು ಚಿನ್ನದ ಸರ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಿದ್ದರು.

ಪ್ರಕರಣದ ತನಿಖೆ ಮುಂದುವರಿಸಿ ಶುಕ್ರವಾರ ಹಿಡಕಲ್‌ ಡ್ಯಾಂ ಕ್ರಾಸ್‌ ಬಳಿ ಇನ್ನೋರ್ವ ಪ್ರಮುಖ ಆರೋಪಿ ವಿಶಾಲ ಶೆರಖಾನೆಯನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 17.24 ಲಕ್ಷ ರೂ.ಮೌಲ್ಯದ 361.5 ಗ್ರಾಂ ಚಿನ್ನಾಭರಣ, 55,421 ರೂ.ಮೌಲ್ಯದ 785 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ಕಳ್ಳತನಕ್ಕೆ ಬಳಸಿದ 80 ಸಾವಿರ ರೂ.ಮೌಲ್ಯದ ಕಾರು ವಶಪಡಿಸಿಕೊಂಡು ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನ, ಗೋಕಾಕ್‌ ಡಿಎಸ್ಪಿ ಜಾವೀದ ಇನಾಂದಾರ, ಹುಕ್ಕೇರಿ ಸಿಪಿಐ ರಮೇಶ ಛಾಯಾಗೋಳ ನೇತೃತ್ವದಲ್ಲಿಯಮಕನಮರಡಿ ಪಿಎಸ್‌ಐ ರಮೇಶ ಪಾಟೀಲ, ಸಿಬ್ಬಂದಿ ಬಿ.ವಿ.ನೇರ್ಲಿ, ವಿಠಲ ನಾಯಕ, ಎಲ್‌.ವೈ.ಕಿಲಾರಗಿ, ಮಹೇಶ್‌ ಕರಗುಪ್ಪಿ ಸೇರಿದಂತೆ ಇತರರು ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ