ಆ್ಯಪ್ನಗರ

ಗ್ಯಾಸ್‌ ಸೋರಿಕೆ: ತಪ್ಪಿದ ಅನಾಹುತ

ಬೆಳಗಾವಿ: ನಗರದ ಹೋಟೆಲೊಂದರಲ್ಲಿ ಗುರುವಾರ ಮಧ್ಯಾಹ್ನ ಅಡುಗೆ ಅನಿಲ ಸೋರಿಕೆಯಿಂದ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು...

Vijaya Karnataka 15 Mar 2019, 5:00 am
ಬೆಳಗಾವಿ : ನಗರದ ಹೋಟೆಲೊಂದರಲ್ಲಿ ಗುರುವಾರ ಮಧ್ಯಾಹ್ನ ಅಡುಗೆ ಅನಿಲ ಸೋರಿಕೆಯಿಂದ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಕೈಗೊಂಡ ಮುನ್ನೆಚ್ಚರಿಕೆ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದೆ.
Vijaya Karnataka Web BLG-1403-2-52-14 GAS1


ಇಲ್ಲಿನ ಶನಿವಾರ ಕೂಟ್‌ ಬಳಿಯ ಮಹಿಳಾ ಅಘಾಡಿ ಹೋಟೆಲ್‌ನಲ್ಲಿ ಅಡುಗೆ ಅನಿಲದ ಸಿಲಿಂಡರ್‌ ಬದಲಾಯಿಸುವ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಗ್ಯಾಸ್‌ ಸೋರಿಕೆಯಾಗಲಾರಂಭಿಸಿದೆ. ತಕ್ಷಣ ಹೋಟೆಲ್‌ನಲ್ಲಿ ಉರಿಸುತ್ತಿದ್ದ ಇತರೆ ಒಲೆಗಳನ್ನು ಬಂದ್‌ ಮಾಡಿದ ಮಹಿಳೆಯರು ಗ್ಯಾಸ್‌ ಸೋರುವ ಜಾಗವನ್ನು ಕೈಯಿಂದ ಮುಚ್ಚಿ ಹಿಡಿದಿದ್ದಾರೆ. ಅಲ್ಲದೆ, ಕಿಟಕಿಯ ಬಾಗಿಲುಗಳನ್ನು ತೆರೆದ್ದಿರಿಂದ ದೊಡ್ಡ ಅನಾಹುತ ತಪ್ಪಿದೆ.

ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸಿಲಿಂಡರನ್ನು ಸುರಕ್ಷಿತವಾಗಿ ಹೊರಗೆ ತಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ