ಆ್ಯಪ್ನಗರ

ಮಹದಾಯಿ ಬರಿದಾಗುತ್ತಿದೆ ಎಂದು ಗೋವಾ ಸಂಘಟನೆಗಳಿಂದ ಬೊಬ್ಬೆ

ಪಣಜಿ: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ...

Vijaya Karnataka 15 Mar 2020, 5:00 am
ಪಣಜಿ: ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಮಹದಾಯಿ ಯೋಜನೆ ಕುರಿತು ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸುತ್ತಿದ್ದಂತೆ ಗೋವಾದಲ್ಲಿಈ ಯೋಜನೆಗೆ ವಿರೋಧ ಮತ್ತಷ್ಟು ಹೆಚ್ಚಾಗುತ್ತಿದೆ.
Vijaya Karnataka Web goa organizations are boasting that the mahadei is draining
ಮಹದಾಯಿ ಬರಿದಾಗುತ್ತಿದೆ ಎಂದು ಗೋವಾ ಸಂಘಟನೆಗಳಿಂದ ಬೊಬ್ಬೆ


ಪ್ರತಿರೋಧದ ಮುಂದುವರಿದ ಭಾಗವಾಗಿ ಗೋವಾದಲ್ಲಿನ ವಿವಿಧ ಮಹದಾಯಿ ಹೋರಾಟ ಸಂಘಟನೆಗಳು ಕಳಸಾ- ಬಂಡೂರಿ ಯೋಜನೆ ಕಾಮಗಾರಿ ನಡೆಯುವ ಸ್ಥಳ ಮತ್ತು ಮಹದಾಯಿ ನದಿ ಉಗಮ ಸ್ಥಳಕ್ಕೆ ಭೇಟಿ ನೀಡಿ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿಹರಿಬಿಟ್ಟಿವೆ. ಆ ಮೂಲಕ ಮಹ ದಾಯಿ ಬರಿದಾಗುತ್ತಿದೆ ಎಂದು ಬೊಬ್ಬೆ ಹೊಡೆದು, ಹೋರಾಟಕ್ಕೆ ಸನ್ನದ್ಧರಾಗುವಂತೆ ಗೋವಾ ರಾಜ್ಯದ ಜನರನ್ನು ಎತ್ತಿಕಟ್ಟುತ್ತಿವೆ. ''ಮಹದಾಯಿ ನದಿ ನೀರಿನ ಶೇಕಡಾವಾರು ಪ್ರಮಾಣವನ್ನು ಕರ್ನಾಟಕ ತಿರುಗಿಸಿಕೊಂಡಿದೆ. ಏಳಿ, ಎದ್ದೇಳಿ ಗೋವನ್ನರೆ'', ಎಂದು ಜನರನ್ನು ಪ್ರಚೋದಿಸುವ ಕಾರ್ಯದಲ್ಲಿತೊಡಗಿವೆ.

ಮಹ ದಾಯಿ ನದಿಯಲ್ಲಿನೀರು ಬತ್ತಿ ಹೋಗಿರುವೆ ಎಂಬಂತೆ ಬಿಂಬಿತ ವಾಗಿರುವ ಈ ಚಿತ್ರಗಳು ಸದ್ಯ ಗೋವಾದಲ್ಲಿವೈರಲ್‌ ಆಗಿವೆ. ಪ್ರಧಾನಿ ಭೇಟಿ ಮಾಡಿದ ಸಿಎಂ: ಈ ಮಧ್ಯೆ, ಎರಡು ದಿನಗಳ ಹಿಂದಷ್ಟೇ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್‌ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕರ್ನಾಟಕದ ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರದಿಂದ ಅಗತ್ಯ ಪರವಾನಗಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ