ಆ್ಯಪ್ನಗರ

ನೆರೆಪೀಡಿತ ಗ್ರಾಮಗಳ ಸ್ಥಳಾಂತರಕ್ಕೆ ಸರಕಾರ ಚಿಂತನೆ

ಐನಾಪುರ/ಕಾಗವಾಡ: ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಕಾಗವಾಡ ...

Vijaya Karnataka 15 Aug 2019, 5:00 am
ಐನಾಪುರ/ಕಾಗವಾಡ: ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ, ಬನಜವಾಡ, ಶಹಾಪುರ, ಕಾತ್ರಾಳ ಸೇರಿದಂತೆ 9 ಗ್ರಾಮಗಳ 16,495 ಸಂತ್ರಸ್ತ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪ್ರತಿ ಕುಟುಂಬಕ್ಕೆ 3800 ರೂ.ನಂತೆ ಒಟ್ಟು 3.35ಕೋಟಿ ರೂ. ತಾತ್ಕಾಲಿಕ ಪರಿಹಾರ ಧನ ಚೆಕ್‌ಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಮಾಜಿ ಶಾಸಕ ರಾಜು ಕಾಗೆ ವಿತರಿಸಿದರು.
Vijaya Karnataka Web BEL-14-AINAPUR-2


ಐನಾಪುರ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾರಂಭಿಸಿರುವ ಕಾಳಜಿ ಕೇಂದ್ರದಲ್ಲಿ ಬುಧವಾರ ಕೆಲವರಿಗೆ ಸಾಂಕೇತಿಕವಾಗಿ ಚೆಕ್‌ಗಳನ್ನು ವಿತರಿಸಲಾಯಿತು.

''ಕಾಗವಾಡ ತಾಲೂಕಿನ ಐನಾಪುರ, ಜುಗೂಳ, ಮಂಗಾವತಿ, ಶಹಾಪುರ, ಕೃಷ್ಣಾ ಕಿತ್ತೂರ, ಹಿಪ್ಪರಗಿ, ಕುಸನಾಳ, ಉಗಾರ ಬುದ್ರುಕ, ಉಗಾರ ಖುರ್ದ ಗ್ರಾಮಗಳು ಆಣೆಕಟ್ಟೆಯ ಹಿನ್ನೀರಿನಿಂದ ಜಲಾವೃತಗೊಂಡಿವೆ. ಈ ಗ್ರಾಮಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದ್ದು ಅಲ್ಲಿನ ನಾಗರಿಕರು ಚಿಂತಿಸುವ ಅಗತ್ಯವಿಲ್ಲ'' ಎಂದು ಈ ವೇಳೆ ಮಾಜಿ ಶಾಸಕ ಕಾಗೆ ಅಭಯ ನೀಡಿದರು.

ಚಿಕ್ಕೋಡಿ ಕೃಷಿ ಇಲಾಖೆಯ ಉಪನಿರ್ದೇಶಕ ಹಿಮ್ಮತರಾವ್‌ ಕೊಳೇಕರ ಮಾತನಾಡಿ, ಕೃಷ್ಣಾ ಕಿತ್ತೂರ-1505, ಬಣಜವಾಡ-972 ಹಾಗೂ ಕಾತ್ರಾಳ-268 ಕುಟುಂಬಗಳು ಪ್ರವಾಹದ ನೀರಿನಿಂದ ಬಾಧೆಗೊಳಗಾಗಿವೆ ಎಂದು ಮಾಹಿತಿ ನೀಡಿದರು.

ಈ ವೇಳೆ ಮೋಳೆ ಜಿಪಂ ಸದಸ್ಯೆ ಪುಟ್ಟರಾಜಮ್ಮ ತುಗಶೆಟ್ಟಿ, ಪಪಂ ಉಪಾದ್ಯಕ್ಷ ರವೀಂದ್ರ ಗಾಣಿಗೇರ, ಜಿಪಂ ಮಾಜಿ ಸದಸ್ಯ ಶ್ರೀಶೈಲ ತುಗಶೆಟ್ಟಿ, ಮುಖಂಡರಾದ ಶಿವಗೌಡ ಪಾರಶೆಟ್ಟಿ, ಗಜಾನನ ಯರಂಡೋಲಿ, ಡಾ. ಮೋಹನರಾವ್‌ ಕಾರ್ಚಿ, ಪ್ರಕಾಶ ಕೊರ್ಬು, ದಾದಾ ಪಾಟೀಲ, ಅಣ್ಣಾಸಾಬ ಡೂಗನವರ, ವಿಶ್ವನಾಥ ಪಾಟೀಲ, ಅಣ್ಣಾಸಾಬ ಜಾಯಗೌಡ, ರಾಜು ಮದನೆ, ಸಹಾಯಕ ಕೃಷಿ ಅಧಿಕಾರಿ ಮಹಾಂತೇಶ ನರಗಟ್ಟಿ, ನೋಡಲ್‌ ಅಧಿಕಾರಿಗಳಾದ ಜಿ.ಎಂ. ಗುಳಪ್ಪನವರ, ಆರ್‌.ಪಿ. ಅವತಾಡೆ, ಕೆ.ಕೆ. ಕುಲಕರ್ಣಿ, ಬಿ.ಬಿ. ನಾಯಿಕ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ