ಆ್ಯಪ್ನಗರ

ಬೆಳಗಾವಿ: ಶೀಘ್ರವೇ ಆರಂಭವಾಗಲಿದೆ ಮಹಿಳಾ ಬಜಾರ್‌

ಸ್ತ್ರೀ ಸಂಘಗಳು ರಾಜಕೀಯ ರಹಿತವಾಗಿ ಇರಬೇಕು. ಆಗ ಮಾತ್ರ ಸಂಘಗಳು ಯಶಸ್ವಿಯಾಗಿ ಬೆಳೆಯಲು ಸಾಧ್ಯ. ಹಾಗಾಗಿ ಚುನಾವಣೆ ಸಮಯದಲ್ಲಿ ಯಾವುದೇ ವ್ಯಕ್ತಿ, ಪಕ್ಷದ ಜತೆಗೆ ಗುರುತಿಸಿಕೊಳ್ಳಬೇಡಿ ಎಂದು ಅಭಯ ಪಾಟೀಲ್‌ ತಿಳಿಸಿದರು.

Vijaya Karnataka Web 28 Jan 2020, 4:41 pm
ಬೆಳಗಾವಿ: ಈ ವರ್ಷದ ಬಜೆಟ್‌ನಲ್ಲಿ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಯೋಜನೆ ಘೋಷಣೆ ಮಾಡಬೇಕು. ನಾನು ನನ್ನ ಕ್ಷೇತ್ರದಲ್ಲಿ ಮಹಿಳಾ ಬಜಾರ್‌ ಆರಂಭಿಸುತ್ತಿದ್ದೇನೆ. ಪ್ರತಿಯೊಂದು ಜಿಲ್ಲೆಯಲ್ಲಿ ಸರಕಾರದಿಂದ ಇಂತಹ ಬಜಾರ್‌ಗಳನ್ನು ಆರಂಭಿಸಬೇಕು ಎಂದು ಶಾಸಕ ಅಭಯ ಪಾಟೀಲ ಮನವಿ ಮಾಡಿದರು.
Vijaya Karnataka Web ಅಭಯ್‌ ಪಾಟೀಲ್‌
ಅಭಯ್‌ ಫಾಟೀಲ್


ನಗರದ ಗಾಂಧಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸಮಾವೇಶ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಅಭಯ ಪಾಟೀಲ್‌ ಮಾತನಾಡಿದರು.

ಸ್ತ್ರೀ ತನ್ನ ಕಾಲ ಮೇಲೆ ತಾನು ನಿಂತಕೊಳ್ಳಬೇಕು. ಸಮಾಜದಲ್ಲಿ ಅಸಮತೋಲನ ಕಾಣುತ್ತಿದ್ದೇವೆ. ಸಮಾಜದಲ್ಲಿ ಪುರುಷರ ಸಮಾನರಾಗಿ ಹೆಣ್ಣು ಮಕ್ಕಳ ಇರಬೇಕು. ಹೆಣ್ಣು-ಗಂಡು ಅಸಮಾನತೆಯನ್ನ ಮನೆಯ ತಾಯಿಂದಿರು ಮಾಡಬಾರದು. ಹೆಣ್ಣು- ಗಂಡು ಎಂಬ ಭೇದ ಭಾವ ಮಾಡಬಾರದು. ಸಮಾವೇಶದಲ್ಲಿ‌ ಭಾಗವಹಿಸಿದ ಮಹಿಳೆಯರು ನೀವು ನಿಮ್ಮ ಊರಲ್ಲಿನ ಮಹಿಳೆಯರಿಗೆ ತಿಳಿಹೇಳಬೇಕು ಎಂದು ಸಲಹೆ ನೀಡಿದರು.

ಸ್ತ್ರೀ ಸಂಘಗಳು ರಾಜಕೀಯ ರಹಿತವಾಗಿ ಇರಬೇಕು. ಆಗ ಮಾತ್ರ ಸಂಘಗಳು ಯಶಸ್ವಿಯಾಗಿ ಬೆಳೆಯಲು ಸಾಧ್ಯ. ಹಾಗಾಗಿ ಚುನಾವಣೆ ಸಮಯದಲ್ಲಿ ಯಾವುದೇ ವ್ಯಕ್ತಿ, ಪಕ್ಷದ ಜತೆಗೆ ಗುರುತಿಸಿಕೊಳ್ಳಬೇಡಿ ಎಂದು ಅಭಯ ಪಾಟೀಲ್‌ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೋಷನ ಅಭಿಯಾನದ ಭೀತಿ ಪತ್ರಗಳ ಬಿಡುಗಡೆಗೊಳಿಸಿದರು. ಮಗುವಿಗೆ ಅನ್ನ ಉಣಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಬಳಿಕ ಸಿಮಂತ ಕಾರ್ಯಕ್ರಮ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ