ಆ್ಯಪ್ನಗರ

ಗುಡ್ಡಾಪುರ ದಾನಮ್ಮದೇವಿ ಜಾತ್ರೆಗೆ ಸಕಲ ಸಿದ್ಧತೆ

ತೆಲಸಂಗ: ಸಮೀಪದ ಗುಡ್ಡಾಪುರದಲ್ಲಿ ಬುಧವಾರದಿಂದ ಆರಂಭವಾಗಿರುವ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಡಿ...

Vijaya Karnataka 6 Dec 2018, 5:00 am
ತೆಲಸಂಗ : ಮೀಪದ ಗುಡ್ಡಾಪುರದಲ್ಲಿ ಬುಧವಾರದಿಂದ ಆರಂಭವಾಗಿರುವ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಡಿ.8ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಶಂಭುಲಿಂಗ ಮಮದಾಪುರ ಹೇಳಿದರು.
Vijaya Karnataka Web BEL-5TELSANG2


ಸಮೀಪದ ಗುಡ್ಡಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕರ್ನಾಟಕದ ಗಡಿಗೆ ಸಮೀಪವಿರುವ ಗುಡ್ಡಾಪುರವು ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿ ನೆಲೆಸಿರುವ ದಾನಮ್ಮದೇವಿಯ ಶೇ.99ರಷ್ಟು ಭಕ್ತರು ಕನ್ನಡಿಗರೇ ಆಗಿದ್ದಾರೆ. 3 ದಿನಗಳ ಕಾಲ ನಡೆಯುವ ಜಾತ್ರೆಗೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ಅಂದಾಜು 8 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ.

ದಾನಮ್ಮದೇವಿಗೆ ಆಗಮಿಸುವ ಭಕ್ತರು ಕಾಲ್ನಡಿಗೆಯಲ್ಲಿ ಬರುವುದು ವಿಶೇಷ. ಅಥಣಿ, ತೆಲಸಂಗ, ವಿಜಯಪುರ, ತಿಕೋಟಾ ಹೀಗೆ ಹಲವು ಮಾರ್ಗಗಳಿಂದ ಜನ ಪಾದಯಾತ್ರೆಯಲ್ಲಿ ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ. ಹೀಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತಾದಿಗಳಿಗೆ ಮಾರ್ಗ ಮಧ್ಯ ಭಕ್ತಾದಿಗಳು ಸ್ವಯಂ ಅನ್ನಪ್ರಸಾದ ಛತ್ರಗಳನ್ನು ತೆರೆದು ಭಕ್ತಾದಿಗಳ ಸೇವೆ ಮಾಡುತ್ತಾರೆ. ಪ್ರತಿ ಕಿಮೀ ಅಂತರದಲ್ಲಿ ಉಪಹಾರ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಹೀಗೆ ಸ್ವಯಂ ಭಕ್ತಿಯ ಸಮರ್ಪಣೆ ನಡೆಯುತ್ತದೆ.

ಅನ್ನ ಛತ್ರದ ಸ್ಥಳ ಬದಲು :
ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದ ಒದಗಿಸಲು ದೇವಸ್ಥಾನ ಟ್ರಸ್ಟ್‌ ಪ್ರತಿವರ್ಷ 5ಎಕರೆ ಭೂಮಿಯಲ್ಲಿ ಛತ್ರ ನಿರ್ಮಿಸಿ ಪ್ರಸಾದ ಒದಗಿಸುವ ಕೆಲಸ ಮಾಡುತ್ತದೆ. ವರ್ಷದಿಂದ ವರ್ಷಕ್ಕೆ ಜನದಟ್ಟಣೆ ಹೆಚ್ಚುತ್ತಿರುವುದರಿಂದ ಈ ವರ್ಷ ದೇವಸ್ಥಾನದ ಹೊರವಲಯದಲ್ಲಿನ ಕರ್ನಾಟಕ ಭವನ ನಿರ್ಮಾಣಕ್ಕೆ ಕಾಯ್ದಿರಿಸಿರುವ ಕಂಪೌಂಡ್‌ ಮಧ್ಯದಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

ಕಡಿಮೆ ದರದಲ್ಲಿ ಬಾಟಲಿ ನೀರು :
ಈ ಭಾಗದಲ್ಲಿ ಭೀಕರ ಬರ ಉಂಟಾಗಿರುವುದರಿಂದ ನೀರಿನ ಅಭಾವ ಹೆಚ್ಚಾಗಿದೆ. ಟ್ರಸ್ಟ್‌ ವತಿಯಿಂದ ಟ್ಯಾಂಕರ್‌ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳು ಮಿತವಾಗಿ ನೀರು ಬಳಸಿ ಸಹಕರಿಸಬೇಕು. ಜತೆಗೆ ಟ್ರಸ್ಟ್‌ ವತಿಯಿಂದ ಕುಡಿಯಲು ಫಿಲ್ಟರ್‌ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದಾಗ್ಯೂ ಕುಡಿಯುವ ನೀರಿನ ತೊಂದರೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಕಡಿಮೆ ದರದಲ್ಲಿ ಕೇವಲ 7 ರೂ. ಬೆಲೆಯ ಶುದ್ಧ ಕುಡಿಯುವ ನೀರಿನ ಬಾಟಲಿಗಳನ್ನು ಮಾರುವ ವ್ಯವಸ್ಥೆಯನ್ನು ಅಲ್ಲಲ್ಲಿ ಮಾಡಲಾಗಿದೆ.

ಉಚಿತ ವೈದ್ಯಕಿಯ ವ್ಯವಸ್ಥೆ :
ಭಕ್ತಾದಿಗಳ ಅನಕೂಲಕ್ಕಾಗಿ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು. ಕನ್ನಡದಲ್ಲಿಯೇ ವ್ಯವಹಾರ, ಕನ್ನಡದಲ್ಲಿಯೇ ಧ್ವನಿವನಿವರ್ಧಕದ ಸೂಚನೆಗಳನ್ನು ನೀಡಲಾಗುವುದು. ಕಮಿಟಿ ವತಿಯಿಂದ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ವಿಷಯದಲ್ಲಿ ಭಕ್ತಾದಿಗಳು ಕಮಿಟಿ ಕೈಗೊಳ್ಳುವ ಕೆಲಸಗಳಿಗೆ ಸಹಕಾರ ನೀಡಬೇಕು ಎಂದರು.

ಟ್ರಸ್ಟ್‌ ಕಮಿಟಿಯ ಪ್ರಕಾಶ ಗಣಿ, ಸಿದ್ಧಯ್ಯಾ ಹಿರೇಮಠ, ಚಂದ್ರಶೇಖರ ಗೊಬ್ಬಿ, ಬಾಳಾಸಾಬ ಗಾಡವೆ, ಗುರು ಪೂಜಾರಿ, ಅಶೋಕ ಪೂಜಾರಿ ಸೇರಿದಂತೆ ಅನೇಕರು ಇದ್ದರು.

ಜಾತ್ರೆಯ ನಾನಾ ಕಾರ್ಯಕ್ರಮಗಳು :
ಡಿ.6ರಂದು ಸಂಜೆ 7ರಿಂದ 10ಗಂಟೆಯವರೆಗೆ ನೆರವೇರುವ ಕಾರ್ತಿಕ ಉತ್ಸವಕ್ಕೆ ಸಾಂಗಲಿ ಉಸ್ತುವಾರಿ ಮಂತ್ರಿ ಸುಭಸ್‌ ದೇಶಮುಖ, ಮಹಾ ಹಣಕಾಸು ಸಚಿವ ಸುಧೀರ ಮನಗುಂಟವಾರ, ಮಹಾ ಕಂದಾಯ ಮಂತ್ರಿ ಚಂದ್ರಕಾಂತದಾದಾ ಪಾಟೀಲ, ಸಾಂಗಲಿ ಸಂಸದ ಸಂಜಯ ಪಾಟೀಲ, ಜತ್ತ ಶಾಸಕ ವಿಲಾಸರಾವ ಜಗತಾಪ್‌ ಪಾಲ್ಗೊಳ್ಳಲಿದ್ದಾರೆ. ಡಿ.7 ರಂದು ಸಂಜೆ 5ಗಂಟೆಗೆ ದಾನಮ್ಮದೇವಿಯ ರಥೋತ್ಸವ ನೆರವೇರಲಿದ್ದು, ಕರ್ನಾಟಕ ಸರಕಾರದ ಆರೋಗ್ಯಮಂತ್ರಿ ಶಿವಾನಂದ ಪಾಟೀಲ, ಮುಜರಾಯಿ ಸಚೀವ ರಾಜಶೇಖರ ಪಾಟೀಲ, ಜಮಖಂಡಿ ಸಾಸಕ ಆನಂದ ನ್ಯಾಮಗೌಡ ಪಾಲ್ಗೊಳ್ಳುವರು ಎಂದು ಟ್ರಸ್ಟ್‌ ಕಮಿಟಿಯವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ