ಆ್ಯಪ್ನಗರ

ರಾಜಕೀಯಕ್ಕೆ ಈಗ ವಿರಾಮ, ಜನರ ಆರೋಗ್ಯ ಮುಖ್ಯ: ಬೆಳಗಾವಿಯಲ್ಲಿ ಸಚಿವ ಸುಧಾಕರ್‌ ಹೇಳಿಕೆ

ಕೊರೊನಾ ಲಸಿಕೆಯ ಬಗೆಗಿನ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ಹೇಳಿದ್ದು, ಬಳ್ಳಾರಿಯ ಸಂಡೂರಿನ ವ್ಯಕ್ತಿ ಸಾವಿಗೂ ಕೊರೊನಾ ಲಸಿಕೆಗೂ ಸಂಬಂಧ ತರಬೇಡಿ ಎಂದು ಹೇಳಿದರು.

Vijaya Karnataka Web 18 Jan 2021, 4:50 pm
ಬೆಳಗಾವಿ: ಬಳ್ಳಾರಿಯ ಸಂಡೂರಿನ ವ್ಯಕ್ತಿ ಸಾವಿಗೂ ಕೊರೊನಾ ಲಸಿಕೆಗೂ ಸಂಬಂಧ ತರಬೇಡಿ. ಕರ್ನಾಟಕದಲ್ಲಿ ಈವರೆಗೆ 30 ಸಾವಿರ ಜನ ಲಸಿಕೆ ಪಡೆದಿದ್ದಾರೆ. ಅವರಿಗೆ ಇದುವರೆಗೂ ಏನು ಆಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.
Vijaya Karnataka Web dr. k. sudhakar
ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ (ಸಂಗ್ರಹ ಚಿತ್ರ)


ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಡೂರಿನಲ್ಲಿ ವ್ಯಾಕ್ಸಿನ್ ಪಡೆದು ಮರುದಿನ ಸಾವಿಗೀಡಾದ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇತ್ತು. ಸೋಮವಾರ ಎದೆನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫಾರೆನ್ಸಿಕ್ ವರದಿ ಬಂದ ನಂತರ ಹೆಚ್ಚುವರಿ ಮಾಹಿತಿ ಸಿಗಲಿದೆ ಎಂದು ಸುಧಾಕರ್‌ ಹೇಳಿದರು.

ಕರ್ನಾಟಕದಲ್ಲಿ ಈವರೆಗೆ 30 ಸಾವಿರ ಜನ ಲಸಿಕೆ ಪಡೆದಿದ್ದಾರೆ. ಅವರಿಗೆ ಇದುವರೆಗೂ ಏನೂ ಆಗಿಲ್ಲ. ಹಾಗಾಗಿ ಬಳ್ಳಾರಿ ವ್ಯಕ್ತಿ ಸಾವಿಗೂ ವ್ಯಾಕ್ಸಿನ್‌ಗೂ ಸಂಬಂಧ ತರಬೇಡಿ ಎಂದ ಅವರು, ಲಸಿಕೆ ವಿತರಣೆಗೆ ರಾಜ್ಯದಲ್ಲಿ 80 ಸಾವಿರಕ್ಕೂ ಹೆಚ್ಚು ಗುರಿ ನೀಡಲಾಗಿತ್ತು. ನಿರೀಕ್ಷೆಯಷ್ಟು ಗುರಿ ಸಾಧನೆ ಆಗಿಲ್ಲ ಎಂದರು.
ಕೋವಿಡ್ ಲಸಿಕೆ ಸುರಕ್ಷಿತ, ಸುಳ್ಳು ಸುದ್ದಿ ನಂಬಬೇಡಿ, ಸುಧಾಕರ್‌ ಮನವಿಇನ್ನು, ಕಾರ್ಯಕ್ರಮದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಿದ್ದಕ್ಕೆ ಸಚಿವರು ರಾಜೀನಾಮೆ ನೀಡಬೇಕು ಎಂದಿರುವ ನಾರಾಯಣಗೌಡ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಾರಾಯಣಗೌಡ ಯಾರು ಗೊತ್ತಿಲ್ಲ ಎಂದರು. ಅಲ್ಲದೇ, ರಾಜಕೀಯಕ್ಕೆ ಈಗ ವಿರಾಮ ನೀಡಿದ್ದೇನೆ. ರಾಜ್ಯದ ಜನರ ಆರೋಗ್ಯ ನನಗೆ ಮುಖ್ಯ ಎಂದು ರಾಜಕೀಯದ ಬಗ್ಗೆ ಮಾತನಾಡಲು ನಿರಾಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ