ಆ್ಯಪ್ನಗರ

ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

ಬೈಲಹೊಂಗಲ: ಪಟ್ಟಣದಲ್ಲಿ ಕೆಲಕಾಲ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು ಮಧ್ಯಾಹ್ನ 12...

Vijaya Karnataka 1 Jul 2018, 5:00 am
ಬೈಲಹೊಂಗಲ: ಪಟ್ಟಣದಲ್ಲಿ ಕೆಲಕಾಲ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಯಿತು.
Vijaya Karnataka Web BEL-30HTP4


ಮಧ್ಯಾಹ್ನ 12.30ಕ್ಕೆ ಸರಿಯಾಗಿ ಧರೆಗಿಳಿದ ಮಳೆರಾಯ 30 ನಿಮಿಷಗಳ ಕಾಲ ಧಾರಾಕಾರವಾಗಿ ಸುರಿದು ಅವಾಂತರ ಸೃಷ್ಟಿಸಿದ. ಜೋರಾದ ಮಳೆಯಿಂದಾಗಿ ಕೆಲಕಡೆ ವ್ಯಾಪಾರಕ್ಕೆ ಹಚ್ಚಿದ ಬೀದಿ ವ್ಯಾಪಾರಸ್ಥರ ಹಣ್ಣು, ಕಾಯಿಪಲ್ಲೆ, ಆಹಾರ ಸಾಮಾಗ್ರಿಗಳು ಮಳೆ ನೀರಿಗೆ ಕೊಚ್ಚಿ ಹೋಗಿ ಹಳ್ಳ ಸೇರಿದವು. ಕೆಲಕಾಲ ದ್ವಿಚಕ್ರ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಈ ವೇಳೆ ಅಟೋ ಸಂಚಾರ ಎಗ್ಗಿಲ್ಲದೆ ಸಾಗಿತ್ತು. ಮಳೆಯಿಂದಾಗಿ ಎಂಜೆ ಕಾಲನಿ ಗುಡ್ಡದ ಪ್ರದೇಶ, ಅಂಬೇಡ್ಕರ ಓಣಿ, ಗುಂಡ್ಲೂರ ಚಾಳ, ನಂದೆಮ್ಮ ದೇವಿ ನಗರ, ಬಸವೇಶ್ವರ ಆಶ್ರಯ ಕಾಲನಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು. ರಾಯಣ್ಣ ವೃತ್ತದ ಬೋಂಗಾಳೆ ಕೋಲ್ಡ್ರಿಂಕ್ಸ್‌, ಹೊಸೂರ ರಸ್ತೆಯ ಎಲ್‌ಐಸಿ ಕಚೇರಿ ಎದುರು ನೀರು ಸಂಗ್ರಹವಾಗಿದ್ದು ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ