ಆ್ಯಪ್ನಗರ

ಸವದತ್ತಿಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಸವದತ್ತಿ ಪಟ್ಟಣದಲ್ಲಿ ಬುಧವಾರ ಸಂಜೆ 6ರಿಂದ ನಿರಂತರವಾಗಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು...

Vijaya Karnataka 7 Jun 2018, 5:00 am
ಸವದತ್ತಿ: ಪಟ್ಟಣದಲ್ಲಿ ಬುಧವಾರ ಸಂಜೆ 6ರಿಂದ ನಿರಂತರವಾಗಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
Vijaya Karnataka Web BEL-6SDT5


ಇಲ್ಲಿನ ಪ್ರಮುಖ ಲಂಡೇನ ನಾಲಾದ ಆನಿ ಅಗಸಿಯ ಹತ್ತಿರದಲ್ಲಿನ ಇಕ್ಕಟ್ಟಾದ ಸೇತುವೆಯಿಂದ ಹೊರ ಚಿಮ್ಮಿದ ನೀರು ರಸ್ತೆಯಲ್ಲಿ ಹರಿಯಲಾರಂಭಿಸಿದೆ. ಇದರಿಂದ ರಸ್ತೆಯ ಅಕ್ಕಪಕ್ಕದ ಮನೆಗಳೆಲ್ಲ ಜಲಾವೃತಗೊಂಡಿವೆ. ನಾಲಾಕ್ಕೆ ಹೊಂದಿಕೊಂಡಿರುವ ಮೊಕಾಶಿ ಓಣಿ, ಚಿನಿವಾಲರ ಓಣಿ, ಕೊಳ್ಳಾರ ಓಣಿ, ಬಾಲೇಶನವರ ಓಣಿ, ಅಲಾರಕಿ ಓಣಿ, ಕುಂಬಾರ ಓಣಿ, ಸಬನೀಸ ಓಣಿ, ಗಿರಿಜನ್ನವರ ಓಣಿ, ಹೊಸಪೇಠ ಓಣಿ, ಶ್ರೀ ರೇಣುಕಾ ಚಿತ್ರಮಂದಿರ, ಬಿಕ್ಕಣ್ಣವರ ಓಣಿ, ಹಳೆಯ ಬಸ್‌ ಸ್ಟ್ಯಾಂಡ್‌ ರೋಡ್‌ ಸೇರಿದಂತೆ ಅನೇಕ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದ ಮನೆಗಳು ಮತ್ತು ಅಂಗಡಿಗಳು ಜಲಾವೃತಗೊಂಡಿವೆ.

ಹೆಚ್ಚಿನ ಪ್ರಮಾಣದಲ್ಲಿ ನೀರು ಮನೆಗಳಿಗೆ ನುಗ್ಗಿರುವುದರಿಂದ ಪಟ್ಟಣದ ಜನತೆ ಕಂಗಾಲಾಗಿದ್ದಾರೆ. ಲಂಡೇನ ನಾಲಾ ಇತ್ತೀಚಿನ ದಿನಗಳಲ್ಲಿ ಇಕ್ಕಟ್ಟಾಗುತ್ತ ಸಾಗಿದೆ. ಈ ನಾಲಾದ ಸೇತುವೆಗಳಲ್ಲಿ ಹೂಳು ತುಂಬಿದ್ದು, ನೀರು ನಾಲಾದಲ್ಲಿ ಸಾಗದೇ ರಸ್ತೆಯಲ್ಲಿ ಹರಿಯುತ್ತಿದೆ. ಸುತ್ತಲೂ ಗುಡ್ಡದ ಎತ್ತರ ಪ್ರದೇಶದಲ್ಲಿರುವ ನೀರು ಈ ನಾಲಾಕ್ಕೆ ಬಂದು ಸೇರುತ್ತಿರುವುದರಿಂದ ನಾಲಾಕ್ಕೆ ಸಂಬಂಧಿಸಿದ ಸೇತುವೆಗಳನ್ನು ಎತ್ತರಗೊಳಿಸಿ ಹೂಳನ್ನು ಹೊರ ಹಾಕುವ ಕಾರ್ಯ ನಡೆಯಬೇಕಿದೆ. ಇದಕ್ಕೆ ಪುರಸಭೆಯವರು ಸ್ಪಂದಿಸದೇ ಹೋದಲ್ಲಿ ಇಕ್ಕಟ್ಟಾದ ಸೇತುವೆಗಳನ್ನು ಜನರೇ ಒಡೆದು ಹಾಕುವ ಸಾಧ್ಯತೆಗಳೂ ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ