ಆ್ಯಪ್ನಗರ

ಚೋರ್ಲಾ ಘಾಟ್‌ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

ಗೋವಾ-ಕರ್ನಾಟಕ ರಾಜ್ಯವನ್ನು ಜೋಡಿಸುವ ಚೋರ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿಭಾರಿ ವಾಹನಗಳ ಸಂಚಾರವನ್ನು ಡಿಸೆಂಬರ್‌ 31 ರವರೆಗೆ ನಿಷೇಧಿಸಿ ಉತ್ತರ ಗೋವಾ ಜಿಲ್ಲಾಧಿಕಾರಿ ಆರ್‌...

Vijaya Karnataka 5 Oct 2019, 5:00 am
ಪಣಜಿ: ಗೋವಾ-ಕರ್ನಾಟಕ ರಾಜ್ಯವನ್ನು ಜೋಡಿಸುವ ಚೋರ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿಭಾರಿ ವಾಹನಗಳ ಸಂಚಾರವನ್ನು ಡಿಸೆಂಬರ್‌ 31 ರವರೆಗೆ ನಿಷೇಧಿಸಿ ಉತ್ತರ ಗೋವಾ ಜಿಲ್ಲಾಧಿಕಾರಿ ಆರ್‌. ಮೇನಕಾ ಆದೇಶ ಹೊರಡಿಸಿದ್ದಾರೆ.
Vijaya Karnataka Web heavy vehicle movement banned in chorla ghat road
ಚೋರ್ಲಾ ಘಾಟ್‌ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ


ಗೋವಾ-ಕರ್ನಾಟಕ ಜೋಡಿಸುವ ಮತ್ತೊಂದು ರಸ್ತೆ ಅನಮೋಡ ಘಾಟ್‌ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿಕಳೆದ 8 ತಿಂಗಳಿಂದ ವಾಹನ ಸಂಚಾರ ಸಂಪೂರ್ಣ ಬಂದ್‌ ಮಾಡಲಾಗಿದೆ. ಇದರಿಂದಾಗಿ ಗೋವಾದಿಂದ ಬೆಳಗಾವಿ ಭಾಗಕ್ಕೆ ತೆರಳಲು ಚೋರ್ಲಾ ಘಾಟ್‌ ಮಾರ್ಗವನ್ನೇ ಅವಲಂಭಿಸಿರುವಂತಾಗಿದೆ. ಚೋರ್ಲಾ ಘಾಟ್‌ ರಸ್ತೆಯಲ್ಲಿಭಾರಿ ವಾಹನಗಳ ಓಡಾಟ ಹೆಚ್ಚಾಗಿದ್ದರಿಂದ ಇತರೆ ವಾಹನ ಸವಾರರಿಗೆ ತೊಂದರೆಯಾಗಿದ್ದಲ್ಲದೆ, ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೋರ್ಲಾ ಘಾಟ್‌ ರಸ್ತೆಯಲ್ಲಿಭಾರಿ ವಾಹನ ಸಂಚಾರವನ್ನು ಡಿ. 31ರ ವರೆಗೆ ನಿಷೇಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ