ಆ್ಯಪ್ನಗರ

ದುಂದುವೆಚ್ಚದ ಬದಲು ನಿರಾಶ್ರಿತರಿಗೆ ನೆರವಾಗಿ

ರಾಮದುರ್ಗ: ತಾಲೂಕಿನಲ್ಲಿಪ್ರವಾಹದಿಂದ ಸಾಕಷ್ಟು ಹಾನಿಯಾಗಿರುವುದರಿಂದ ವರ್ಷದ ...

Vijaya Karnataka Web 31 Aug 2019, 5:00 am
ರಾಮದುರ್ಗ: ತಾಲೂಕಿನಲ್ಲಿಪ್ರವಾಹದಿಂದ ಸಾಕಷ್ಟು ಹಾನಿಯಾಗಿರುವುದರಿಂದ ವರ್ಷದ ಗಣೇಶ ಹಾಗೂ ಮೊಹರಂ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಬೇಕೆಂದು ಉತ್ತರ ವಲಯದ ಐಜಿಪಿ ರಾಘವೇಂದ್ರ ಸುಹಾಸ ಮನವಿ ಮಾಡಿದರು.
Vijaya Karnataka Web BEL-30RD1


ತಾಲೂಕು ಪಂಚಾಯಿತಿ ಸಭಾಭವನದಲ್ಲಿಶುಕ್ರವಾರ ನಡೆದ ಶಾಂತಿ ಪಾಲನೆ ಸಭೆಯಲ್ಲಿಮಾತನಾಡಿದ ಅವರು, ''ಈ ವರ್ಷ ತಾಲೂಕಿನ 30 ಗ್ರಾಮಗಳು ಜಲಾವೃತಗೊಂಡು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ದುಂದು ವೆಚ್ಚ ಮಾಡುವ ಬದಲು ನಿರಾಶ್ರಿತರಿಗೆ ಸಹಾಯ ಮಾಡಿ ಅವರ ಮನೋಬಲ ಹೆಚ್ಚಿಸಿ'', ಎಂದು ಕಿವಿಮಾತು ಹೇಳಿದರು.

ಎಸ್‌.ಪಿ. ಲಕ್ಷತ್ರ್ಮಣ ನಿಂಬರಗಿ, ''ಗಣೇಶ ಮತ್ತು ಮೊಹರಂ ಸದ್ಭಾವನೆ ಬಿಂಬಿಸುವ ಹಬ್ಬಗಳು. ಎಲ್ಲರೂ ಒಗ್ಗಟ್ಟಾಗಿ ಆಚರಿಸಿದರೆ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ. ಎಲ್ಲರೂ ಕಾನೂನಿನ ಅಡಿಯಲ್ಲಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು'', ಎಂದರು.

ತಾಪಂ ಇಒ ಬಸವರಾಜ ಮಿಲಾನಟ್ಟಿ, ಗ್ರೇಡ್‌-2 ತಹಸೀಲ್ದಾರ ಎಸ್‌.ಕೆ.ತಂಗೊಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಕೆ.ಎಸ್‌.ಕರ್ಕಿ, ಡಿವೈಎಸ್‌ಪಿ ಬಿ.ಎಸ್‌.ಪಾಟೀಲ, ಸಿಪಿಐ ಲಖನ್‌ ಮಸಗುಪ್ಪಿ, ಪಿಎಸ್‌ಐ ಸುನೀಲಕುಮಾರ ನಾಯಕ, ಕ್ರೈಂ ಪಿ.ಎಸ್‌.ಐ ಶೋಭಾ ಭೋಸ್ಲೆ ಸೇರಿದಂತೆ ಸಾರ್ವಜನಿಕ ಗಜಾನನ ಮಂಡಳಿಯ ಪದಾಧಿಧಿಕಾರಿಗಳು, ಎಲ್ಲಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ