ಆ್ಯಪ್ನಗರ

ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲದ ಅನಘ್ರ್ಯ ರತ್ನ

ಮೂಡಲಗಿ ಇಲ್ಲಿನ ವೈಷ್ಣವಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ಆಚರಿಸಲಾಯಿತು...

Vijaya Karnataka 22 May 2018, 5:00 am
ಮೂಡಲಗಿ: ಇಲ್ಲಿನ ವೈಷ್ಣವಿ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ಆಚರಿಸಲಾಯಿತು.
Vijaya Karnataka Web BEL-21MDL1


ಸಂಘದ ಅಧ್ಯಕ್ಷೆ ವಿಮಲಾ ಎಸ್‌. ಸೋನವಾಲಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸಾರದಲ್ಲಿದ್ದುಕೊಂಡು ಪರಮಾರ್ಥವನ್ನು ಸಾಧಿಸಿದ ಮಹಾ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅನೇಕ ಕಷ್ಟಗಳನ್ನು ಅನುಭವಿಸಿ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿದ ಸಮಾಜ ಮತ್ತು ಸ್ತ್ರೀಕುಲದ ಅನಘ್ರ್ಯ ರತ್ನ ಎಂದು ಬಣ್ಣಿಸಿದರು.

ಸಂಘದ ಉಪಾಧ್ಯಕ್ಷೆ ರಜನಿ ಬಂದಿ ಪ್ರಾಸ್ತಾವಿಕ ಮಾತನಾಡಿದರು. ಮಾಧವಿ ಸೋನವಾಲಕರ ಹಾಗೂ ಶ್ರೀದೇವಿ ಸೋನವಾಲಕರ ಇವರು ಹೇಮರಡ್ಡಿ ಮಲ್ಲಮ್ಮಳ ಚರಿತ್ರೆ ಸಾರುವ ಭಕ್ತಿ ಹಾಡು, ಶಿವಸ್ತುತಿ, ಶಿವಬೋಧರಂಗರ ಕುರಿತು ಸುಶ್ರಾವ್ಯವಾಗಿ ಹಾಡಿದರು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ಸಂಘದ ನಿರ್ದೇಶಕರಾದ ಭಾರತಿ ಗಾಣಿಗೇರ, ಸುಮಿತ್ರಾ ಸೋನವಾಲಕರ, ಗೀತಾ ಸೋನವಾಲಕರ, ಮಹಾದೇವಿ ಹಿರೇಮಠ, ತಾರಾ ಸೋನವಾಲಕರ, ಲಕ್ಷ್ಮೀ ಪಾಟೀಲ, ವಿದ್ಯಾ ಸೋನವಾಲಕರ, ಹೇಮಾ ನಾವಳ್ಳಿ ಭಾಗವಹಿಸಿದ್ದರು. ಕಾರ್ಯದರ್ಶಿ ಭರತೇಶ ನಿರೂಪಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ