ಆ್ಯಪ್ನಗರ

ಕನ್ನಡ ರಾಜ್ಯೋತ್ಸವ: ಬೆಳಗಾವಿಯಲ್ಲಿ ಅಗತ್ಯ ಭದ್ರತೆಗೆ ಹೈಕೋರ್ಟ್‌ ಆದೇಶ

ಬೆಳಗಾವಿ ನಗರದಲ್ಲಿಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಭದ್ರತೆ ಒದಗಿಸಬೇಕು ಮತ್ತು ಯಾರಾದರೂ ಆಯುಧಗಳಿಂದ ಅಡ್ಡಿಪಡಿಸಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಿ ಎಂದು ಹೈಕೋರ್ಟ್‌ ಸೂಚಿಸಿದೆ.

Vijaya Karnataka Web 31 Oct 2019, 1:31 pm
ಬೆಂಗಳೂರು: ಬೆಳಗಾವಿ ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅಗತ್ಯ ಭದ್ರತೆ ಒದಗಿಸಬೇಕು ಮತ್ತು ಯಾರಾದರೂ ಆಯುಧಗಳಿಂದ ಅಡ್ಡಿಪಡಿಸಲು ಮುಂದಾದರೆ ಅಂತಹವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್‌ ಬುಧವಾರ ಸರಕಾರಕ್ಕೆ ಆದೇಶ ನೀಡಿದೆ.
Vijaya Karnataka Web kannada


ಬೆಳಗಾವಿ ಪಟ್ಟಣದ ಸಾಂಬಾಜಿ ನಗರದ 'ನ್ಯಾಷನಲ್‌ ಹ್ಯೂಮನ್‌ ರೈಟ್ಸ್‌ ಪ್ರೊಟೆಕ್ಷನ್‌ ಕ್ರೈಮ್‌ ಕಂಟ್ರೋಲ್‌ ಕಮೀಷನ್‌' ಅಧ್ಯಕ್ಷ ರಾಘವೇಂದ್ರ ಬಿ.ಪಿಟಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಸಿಜೆ ಎ.ಎಸ್‌.ಓಕ್‌ ಮತ್ತು ನ್ಯಾ.ಎಸ್‌.ಆರ್‌. ಕೃಷ್ಣಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಮಧ್ಯಾಂತರ ಆದೇಶ ನೀಡಿ ವಿಚಾರಣೆಯನ್ನು ನ.6ಕ್ಕೆ ಮುಂದೂಡಿತು.

ಕನ್ನಡ ರಾಜೋತ್ಸವ ಆಚರಣೆ ಮಾಡುವುದು ಅರ್ಜಿದಾರರ ಹಕ್ಕು, ಹಾಗಾಗಿ ಪೊಲೀಸರು ಅರ್ಜಿದಾರರ ರಾಜೋತ್ಸವಕ್ಕೆ ಅಗತ್ಯ ಭದ್ರತೆ ಒದಗಿಸಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು. ಸರಕಾರಿ ವಕೀಲರಾದ ಕೃಷ್ಣ ಸರಕಾರ ರಾಜೋತ್ಸವ ಆಚರಣೆಗೆ ಅಗತ್ಯ ಭದ್ರತೆಯನ್ನು ಒದಗಿಸಲಿದೆ ಎಂದರು. ಅರ್ಜಿಯಲ್ಲಿಮಹಾರಾಷ್ಟ ಏಕೀಕರಣ ಸಮಿತಿಯನ್ನೂ ಸಹ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ