ಆ್ಯಪ್ನಗರ

ಹಾಡಹಗಲೇ ಏಕಾಏಕಿ ಕುಸಿದು ಬಿದ್ದ ಮನೆಗಳು

ಈಶ್ವರ ಹೋಟಿ ಬೈಲಹೊಂಗಲ ಪಟ್ಟಣದ ತಿಗಡಿ ಗಲ್ಲಿಯ ಎರಡು ಮನೆಗಳು ಹಾಡಹಗಲೇ ಶನಿವಾರ ಮಧ್ಯಾಹ್ನ ...

Vijaya Karnataka 19 Aug 2019, 5:00 am
ಈಶ್ವರ ಹೋಟಿ ಬೈಲಹೊಂಗಲ
Vijaya Karnataka Web BEL-18HTP3

ಪಟ್ಟಣದ ತಿಗಡಿ ಗಲ್ಲಿಯ ಎರಡು ಮನೆಗಳು ಹಾಡಹಗಲೇ ಶನಿವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾಯುವ ದೇವರು ದೊಡ್ಡವ ಎಂದು ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಬಿದ್ದ ಮನೆಗಳು ರಾಜು ನಬೀಸಾಬ ನದಾಫ ಹಾಗೂ ಕಾದ್ರೋಳ್ಳಿಮಠ ಅವರಿಗೆ ಸೇರಿವೆ. ಶನಿವಾರ ಮಧ್ಯಾಹ್ನ 2ಕ್ಕೆ ನದಾಫ್‌ ಅವರ ಮನೆಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕರ್‌ಕರ್‌ ಎಂಬ ಶಬ್ದ ಕೇಳುತ್ತಿದ್ದಂತೆಯೇ, ಮಗಳು ಸಿಮ್ರಾನ್‌(10ನೇ ತರಗತಿ) ತಾಯಿ ವಾಯಿದಾಳನ್ನು ಕರೆದುಕೊಂಡು ಹಿತ್ತಲಿನ ಕಡೆಗೆ ಓಡಿ ಹೊರಗೆ ಹೋದರು. ಪಕ್ಕದ ಮನೆಯ ಎತ್ತರದ ಗೋಡೆ ಕುಸಿದು ನದಾಫ ಅವರ ಮನೆಯ ಮೇಲೆ ಬಿದ್ದ ಪರಿಣಾಮ, ಎರಡೂ ಮನೆಗಳು ನೆಲಕ್ಕುರುಳಿವೆ. ಒಂದು ಕ್ಷ ಣ ವಿಳಂಬವಾಗಿದ್ದರೂ, ಪ್ರಾಣಾಪಾಯ ಕಾದಿತ್ತು.

ಸಿಮ್ರಾನ್‌ಳ ಸಮಯಪ್ರಜ್ಞೆ, ಧೈರ್ಯದಿಂದ ಮನೆಯಿಂದ ಹೊರಗೆ ಹೋಗುವ ಸಾಹಸ ಮಾಡಿದ್ದರಿಂದ ಇಬ್ಬರ ಪ್ರಾಣ ಉಳಿಯಿತು. ಇನ್ನೊಬ್ಬ ಮಗ ಸಯ್ಯದ (1ನೇ ತರಗತಿ), ರಾಜು ನದಾಫ್‌ ಇಬ್ಬರೂ ಹೊರಗೆ ಹೋಗಿದ್ದರು. ಕಾದ್ರೋಳ್ಳಿಮಠ ಅವರು ಮನೆಯಲ್ಲಿ ಯಾರೂ ಇರಲಿಲ್ಲ ಎನ್ನುವುದು ಇನ್ನೊಂದು ಸಮಾಧಾನದ ವಿಷಯ. ಎರಡೂ ಕುಟುಂಬಗಳಲ್ಲಿ ತೀವ್ರ ಬಡತನವಿದೆ. ರಾಜು ನದಾಫ್‌ ವಿಶೇಷಚೇತನರಾಗಿದ್ದು, ಸಣ್ಣ-ಪುಟ್ಟ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ಸರಕಾರ ಗೋಡೆ ಕುಸಿದವರಿಗೆ 5 ಸಾವಿರ ರೂ., ಸಂಪೂರ್ಣ ಮನೆ ಕುಸಿದರೆ 20 ಸಾವಿರ ರೂ. ಕೊಡುವುದನ್ನು ಬಿಟ್ಟು ಪ್ರತ್ಯೇಕ ಒಂದು ಮನೆಗೆ 5 ಲಕ್ಷ ರೂ. ನೀಡಬೇಕೆಂದು ತಿಗಡಿ ಗಲ್ಲಿಯ ನಾಗರಿಕರು ಸರಕಾರವನ್ನು ಒತ್ತಾಯಿಸಿದ್ದಾರೆ. ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ , ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಭೇಟಿ ನೀಡಿದರು.

* ನದಾಫ್‌ ಹಾಗೂ ಕಾದ್ರೋಳ್ಳಿಮಠ ಅವರ ಮನೆಗಳು ಕುಸಿದಿದ್ದು, ಶೀಘ್ರವೇ ಅವರಿಗೆ ಪರಿಹಾರ ಧನ ವಿತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ.
- ಡಾ. ದೊಡ್ಡಪ್ಪ ಹೂಗಾರ, ತಹಸೀಲ್ದಾರ, ಬೈಲಹೊಂಗಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ