ಆ್ಯಪ್ನಗರ

ಜೂ.2, 3ರಂದು ಪಣಜಿಯಲ್ಲಿ ಹೊರನಾಡು ಉತ್ಸವ

ಪಣಜಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಇವುಗಳ ಸಹಯೋಗದಲ್ಲಿ ಜೂ...

Vijaya Karnataka 29 May 2018, 5:00 am
ಪಣಜಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ದಕ್ಷಿಣ ಕೇಂದ್ರ ವಲಯ ಸಾಂಸ್ಕೃತಿಕ ಕೇಂದ್ರ ನಾಗಪುರ ಹಾಗೂ ಗೋವಾ ಕನ್ನಡ ಸಮಾಜ ಪಣಜಿ ಇವುಗಳ ಸಹಯೋಗದಲ್ಲಿ ಜೂ. 2 ಮತ್ತು 3ರಂದು ಪಣಜಿಯ ಮೆನೆಜಿಸ್‌ ಬ್ರಾಗಾಂಜಾ ಸಭಾಗೃಹದಲ್ಲಿ 'ಹೊರನಾಡು ಉತ್ಸವ' ಆಯೋಜಿಸಲಾಗಿದೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬಾದಾಮಿ ತಿಳಿಸಿದರು.
Vijaya Karnataka Web horanadu utsav in panjim on june 2 and 3
ಜೂ.2, 3ರಂದು ಪಣಜಿಯಲ್ಲಿ ಹೊರನಾಡು ಉತ್ಸವ


ಅವರು ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಭಾರತೀಯ ರಿಸರ್ವ್‌ ಬ್ಯಾಂಕ್‌ ಗೋವಾ ಶಾಖೆಯ ಡೆಪ್ಯುಟಿ ಮ್ಯಾನೇಜರ್‌ ಮೀನಾಕ್ಷಿ ಗಡ ಅವರು ಜೂ. 2ರಂದು ಸಂಜೆ 5.30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಗೋವಾ ಸರಕಾರದ ವಿಮಾನಯಾನ ಇಲಾಖೆ ನಿರ್ದೇಶಕ ಸುರೇಶ್‌ ಶಾನಭಾಗ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಕ್ಕೆ ವಚನ ಗಾಯನ, 6.30ಕ್ಕೆ ಜಾನಪದ ಗೀತೆಗಳು, 7ಕ್ಕೆ ಚೌಡಕಿ ಪದಗಳ ಕಾರ್ಯಕ್ರಮ ನಡೆಯಲಿದೆ. ನಂತರ ಜರುಗುವ 'ಜಾನಪದ ಸಂಭ್ರಮ' ಕಾರ್ಯಕ್ರಮದಲ್ಲಿ ಕೋಲಾರ ತಂಡದಿಂದ ತಮಟೆ ವಾದನ, ರಾಮನಗರ ತಂಡದಿಂದ ಪೂಜಾ ಕುಣಿತ, ಬೆಂಗಳೂರು ತಂಡದಿಂದ ಪಟಾ ಕುಣಿತ, ದಾವಣಗೆರೆ ತಂಡದಿಂದ ಕೋಲಾಟ, ಮಂಗಳೂರು ತಂಡದಿಂದ ಕಂಗೀಲು ನೃತ್ಯ, ಮೈಸೂರು ತಂಡದಿಂದ ನಗಾರಿ ವಾದನ, ಕಲಬುರ್ಗಿ ತಂಡದಿಂದ ಕರಡಿ ಮಜಲು, ಕಾರವಾರ ತಂಡದಿಂದ ಸಿದ್ಧಿ ಢಮಾಮಿ ನೃತ್ಯ ಜರುಗಲಿದೆ'', ಎಂದು ವಿವರಿಸಿದರು.

''ಜೂ. 3ರಂದು ಸಂಜೆ 5 ಗಂಟೆಗೆ ರಂಗ ಗೀತೆ, 5.30ಕ್ಕೆ ಸುಗಮ ಸಂಗೀತ, 6 ಗಂಟೆಗೆ ಜಾನಪದ ಗೀತೆ, 6.30ಕ್ಕೆ ಗೀಗಿ ಪದ, 7ಕ್ಕೆ ತೊಗಲು ಗೊಂಬೆಯಾಟ ಕಾರ್ಯಕ್ರಮಗಳು ನಡೆಯಲಿವೆ. ನಂತರ ಜರುಗುವ ಜಾನಪದ ಸಂಭ್ರಮದಲ್ಲಿ ಚಿತ್ರದುರ್ಗ ತಂಡದಿಂದ ಕೊಂಬು ಕಹಳೆ, ತುಮಕೂರು ತಂಡದಿಂದ ಸಂಬಾಳ ವಾದನ, ಶಿವಮೊಗ್ಗ ತಂಡದಿಂದ ಡೊಳ್ಳು ಕುಣಿತ, ಚಿಕ್ಕಮಗಳೂರು ತಂಡದಿಂದ ಮಹಿಳಾ ವೀರಗಾಸೆ, ಕೊಡಗು ತಂಡದಿಂದ ಚೀನಿದುಡಿ ಕುಣಿತ, ಮಂಗಳೂರು ತಂಡದಿಂದ ಗುಮಟೆ ಪಾಂಗ್‌, ಉಡುಪಿ ತಂಡದಿಂದ ಕಂಗೀಲು ನೃತ್ಯ, ಹಾಸನ ತಂಡದಿಂದ ಚಿಟ್‌ ಮೇಳ, ಬಾಗಲಕೋಟೆ ತಂಡದಿಂದ ಕರಡಿ ಮಜಲು, ಚಾಮರಾಜನಗರ ತಂಡದಿಂದ ಕಂಸಾಳೆ ನೃತ್ಯ, ಬಳ್ಳಾರಿ ತಂಡದಿಂದ ಹಕ್ಕಿಪಿಕ್ಕಿ ಕುಣಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ'', ಎಂದು ತಿಳಿಸಿದರು. ಸಂಘದ ಕಾರ್ಯದರ್ಶಿ ಅರುಣಕುಮಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ