ಆ್ಯಪ್ನಗರ

ಫೈನಾನ್ಸ್‌ ಸಿಬ್ಬಂದಿಗೆ ರೈತರಿಂದ ಗೃಹಬಂಧನ

ರಾಯಬಾಗ: ತಾಲೂಕಿನ ಮೇಖಳಿ ಗ್ರಾಮದಲ್ಲಿ ಬಂಗಾರದ ಮೇಲಿನ ಸಾಲ ಹಾಗೂ ಬಡ್ಡಿ ಕಟ್ಟುವಂತೆ ನೋಟಿಸ್‌ ನೀಡಲು ಹೋದ ಖಾಸಗಿ ಫೈನಾನ್ಸ್‌ ಕಂಪನಿ ಸಿಬ್ಬಂದಿಯನ್ನು ರೈತರು ...

Vijaya Karnataka 13 Nov 2018, 5:00 am
ರಾಯಬಾಗ : ತಾಲೂಕಿನ ಮೇಖಳಿ ಗ್ರಾಮದಲ್ಲಿ ಬಂಗಾರದ ಮೇಲಿನ ಸಾಲ ಹಾಗೂ ಬಡ್ಡಿ ಕಟ್ಟುವಂತೆ ನೋಟಿಸ್‌ ನೀಡಲು ಹೋದ ಖಾಸಗಿ ಫೈನಾನ್ಸ್‌ ಕಂಪನಿ ಸಿಬ್ಬಂದಿಯನ್ನು ರೈತರು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಎರಡು ಗಂಟೆಗೂ ಹೆಚ್ಚು ಕಾಲ ಕೂಡಿ ಹಾಕಿದ್ದಾರೆ.
Vijaya Karnataka Web house arrest by farmers to financial staff
ಫೈನಾನ್ಸ್‌ ಸಿಬ್ಬಂದಿಗೆ ರೈತರಿಂದ ಗೃಹಬಂಧನ


ರೈತ ರವೀಂದ್ರ ಲಕ್ಷ ್ಮಣ ಪಟೇಗಾರ ರಾಯಬಾಗದ ಖಾಸಗಿ ಫೈನಾನ್ಸ್‌ನಲ್ಲಿ ಕಳೆದ ವರ್ಷ ಡಿ.14ರಂದು ಬಂಗಾರದ ಮೇಲೆ 48 ಸಾವಿರ ರೂ. ಸಾಲ ಪಡೆದಿದ್ದರು. ಫೈನಾನ್ಸ್‌ ಸಿಬ್ಬಂದಿ ಬಸವರಾಜ ಗಾಡಿ ಎಂಬುವರು ಸಾಲದ ನೋಟಿಸ್‌ ಹಿಡಿದು ರೈತನ ಮನೆಗೆ ಸೋಮವಾರ ಹೋಗಿದ್ದಾರೆ. ಆಕ್ರೋಶಗೊಂಡ ಗ್ರಾಮದ ರೈತರು ''ಸರಕಾರ ಮೊದಲು ಕಬ್ಬಿನ ಬಿಲ್‌ ಪಾವತಿಗೆ ಕ್ರಮ ಕೈಗೊಳ್ಳಲಿ. ಆಮೇಲೆ ನಾವು ಸಾಲ ತುಂಬುತ್ತೇವೆ'', ಎಂದು ಪಟ್ಟು ಹಿಡಿದರು. ಅಲ್ಲದೆ, ಸಿಬ್ಬಂದಿ ಬಸವರಾಜ ಗಾಡಿ ಅವರನ್ನು ಕೋಣೆಯೊಂದರಲ್ಲಿ ಎರಡು ಗಂಟೆ ಕಾಲ ಕೂಡಿ ಹಾಕಿ ನಂತರ ಬಿಡುಗಡೆ ಮಾಡಿದರು.

ಘಟನೆ ಕುರಿತು ರಾತ್ರಿವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ರಾಯಬಾಗ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ