ಆ್ಯಪ್ನಗರ

ಪುಲ್ವಾಮಾ ಘಟನೆಗೆ ಹುಕ್ಕೇರಿ ನಾಗರಿಕ ಸಮಿತಿ ಖಂಡನೆ

ಹುಕ್ಕೇರಿ : ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿದ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯಬೇಕೆಂದು ಎಂದು ಒತ್ತಾಯಿಸಿ ...

Vijaya Karnataka 17 Feb 2019, 5:00 am
ಹುಕ್ಕೇರಿ : ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ದಾಳಿ ನಡೆಸಿ ಪೈಶಾಚಿಕ ಕೃತ್ಯ ಎಸಗಿದ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯಬೇಕೆಂದು ಎಂದು ಒತ್ತಾಯಿಸಿ ಹುಕ್ಕೇರಿ ನಾಗರಿಕ ಸಮಿತಿಯುವರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಕಿರಣ ಬೆಳವಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-16 HUKKERI 01


ಉಗ್ರಗಾಮಿಗಳ ಸಂಘಟನೆಗೆ ಕುಮ್ಮಕ್ಕು ನೀಡುತ್ತಿರುವುದು ಪ್ರಾಕಿಸ್ತಾನ ಎಂಬುದು ಬಹಿರಂಗ ಸಂಗತಿಯಾಗಿದ್ದರೂ ಪ್ರಪಂಚದ ಇತರ ದೇಶಗಳು ಕೈ ಕಟ್ಟಿ ಕುಳಿತಿವೆಯೇ ಹೊರತು ಪಾಕಿಸ್ತಾನದ ಮೇಲೆ ದಿಟ್ಟ ನಿರ್ಧಾರ ಕೈಗೊಳ್ಳುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದರು.

ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಪ್ರಾರಂಭಗೊಂಡ ರಾರ‍ಯಲಿ ಬಜಾರ ಮೂಲಕ ಸಂಚರಿಸಿ ಕೋರ್ಟ ಸರ್ಕಲ್‌ನಲ್ಲಿ ಬಹಿರಂಗ ಸಭೆಯಾಗಿ ಮಾರ್ಪಾಟಾಯಿತು. ಪಟ್ಟಣದ ವ್ಯಾಪರಸ್ಥರು ಶಾಲಾ ಕಾಲೇಜುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ನಾಗರಿಗಕರು ಪ್ರತಿಭಟನಾ ರಾರ‍ಯಲಿಯಲ್ಲಿ ಪಾಲ್ಗೊಂಡು ಮೃತ ಯೋಧರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಉದಯ ಹುಕ್ಕೇರಿ ನ್ಯಾಯವಾದಿ ರಾಮಚಂದ್ರ ಜೋಶಿ, ವಿಜಯ ರವದಿ ಸೋಮಶೇಖರ ಮಠಪತಿ ಅರವಿಂದ ಕುಲಕರ್ಣಿ ಜಯಗೌಡ ಪಾಟೀಲ ಚಂದು ಗಂಗಣ್ಣವರ, ಸುನೀಲ ಭೈರಣ್ಣವರ, ಬಸವರಾಜ ಕುರಂದವಾಡಿ, ಬಾಳಸಾಹೇಬ ನಾಯಿಕ, ವೀರೇಶ ಗಜಬರ, ಹಾಗೂ ನಗರದ ವಿವಿಧ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ