ಆ್ಯಪ್ನಗರ

ಕಿತ್ತೂರಿನ ಗತವೈಭವ ಮರುಕಳಿಸಲು ಯತ್ನಿಸುತ್ತೇನೆ

ಕಿತ್ತೂರು ಚನ್ನಮ್ಮನ ಕಾಲದ ಗತ ವೈಭವ ಮರುಕಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೆನರಾ ಕ್ಷೇತ್ರದ ಮೈತ್ರಿಕೂಟ ಪಕ್ಷ ಗಳ

Vijaya Karnataka 4 Apr 2019, 5:00 am
ನೇಗಿನಹಾಳ: ಕಿತ್ತೂರು ಚನ್ನಮ್ಮನ ಕಾಲದ ಗತ ವೈಭವ ಮರುಕಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಕೆನರಾ ಕ್ಷೇತ್ರದ ಮೈತ್ರಿಕೂಟ ಪಕ್ಷ ಗಳ ಅಭ್ಯರ್ಥಿ ಆನಂದ ಅಸ್ನೋಟಿಕರ ಹೇಳಿದರು.
Vijaya Karnataka Web BEL-IMG_20190403_115915


ಗ್ರಾಮದ ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಅವರ ಮನೆಯಲ್ಲಿ ಚುನಾವಣೆ ಪ್ರಚಾರದ ಅಂಗವಾಗಿ ಅವರು ಮಾತನಾಡಿದರು.

ಅನಂತಕುಮಾರ ಹೆಗಡೆಯವರು ಮೊದಲನೇ ಬಾರಿ ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಾಟೆ, 2ನೇ ಬಾರಿ ಚಿತ್ತರಂಜನ್‌ ಹತ್ಯೆ, 3ನೇ ಬಾರಿ ವಾಜಪೇಯಿ ಅಲೆ, 4ನೇ ಬಾರಿ ಕುಮಾರ ಬಂಗಾರಪ್ಪ ಗಾಳಿ, 5ನೇ ಬಾರಿ ಮೋದಿ ಹೆಸರಲ್ಲಿ ಆಯ್ಕೆಯಾಗಿದ್ದಾರೆ ಹೊರತು ತಮ್ಮ ಸ್ವ-ಪ್ರತಿಷ್ಠೆಯ ಮೇಲೆ ಆಯ್ಕೆಯಾಗಿಲ್ಲ ಎಂದರು. ಈ ಬಾರಿಯೂ ಮೋದಿಯವರಿಗೆ ಮತ ನೀಡಿ ಎಂದು ಮತ ಯಾಚಿಸುತ್ತಿದ್ದಾರೆ ಹೊರತು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.

''ಅನಂತಕುಮಾರ ಹೆಗಡೆ ಹಿಂದುತ್ವ, ಕೋಮುಗಲಭೆ, ಅಸಂಬದ್ಧವಾದ ಮಾತಗಳನ್ನು ಆಡುತ್ತ ಬಂದವರು. ಇಂಥ ಮಾತುಗಳೇ ಅವರ ಬಂಡವಾಳ. ಕರಾವಳಿ ಭಾಗದ ಮತದಾರರು ತಮಗೆ ಮತ ನೀಡದಿದ್ದರೂ ಕಿತ್ತೂರು ಹಾಗೂ ಖಾನಾಪುರದ ಮತದಾರರು ತಮ್ಮ ಕಿಸೆಯಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಹಾಗಾದರೆ ಈ ಭಾಗದ ಜನರನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಸಾಹಿತಿಗಳ, ಸಮಾಜ ಚಿಂತಕರ, ಗೌರವಾನ್ವಿತ ರಾಜಕಾರಣಿಗಳ ಬಗ್ಗೆ ಕೇವಲವಾಗಿ ಮಾತನಾಡುತ್ತ ಬಂದಿದ್ದಾರೆ'', ಎಂದು ಆರೋಪಿಸಿದರು.

ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ, ''ಕಿತ್ತೂರಿನ ಕೋಟೆ, ಎಂ.ಕೆ.ಹುಬ್ಬಳ್ಳಿಯ ಗಂಗಾಬಿಕಾ ಕ್ಷೇತ್ರ ಹಾಗೂ ಕಿತ್ತೂರು ಸಂಸ್ಥಾನಕ್ಕೆ ಸಂಬಂಧಿಸಿದ ಹಲವಾರು ಗ್ರಾಮಗಳನ್ನು ಅಭಿವೃದ್ಧಿ ಮಾಡುತ್ತೇನೆ. ಮಹದಾಯಿ ನದಿ ಜೋಡಣೆಗೆ ಶ್ರಮಿಸುತ್ತೇನೆ. ಕಿತ್ತೂರು ಹಾಗೂ ಖಾನಾಪುರ ಭಾಗದಲ್ಲಿ ಉನ್ನತ ಶಿಕ್ಷ ಣಕ್ಕೆ ಆದ್ಯತೆ ನೀಡುತ್ತೇನೆ'', ಎಂದರು.

ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ, ತಮ್ಮ ಬೆಂಬಲ ಸೂಚಿಸಿದರು. ಸಂಪಗಾವ ಜಿಪಂ ಸದಸ್ಯೆ ರೋಹಿಣಿ ಪಾಟೀಲ, ನಿಂಗಪ್ಪ ಅರಿಕೇರಿ, ರಾವಸಾಹೇಬ ಪಾಟೀಲ, ಚಂದ್ರಗೌಡ ಪಾಟೀಲ, ಮುದಕಪ್ಪ ಮರಡಿ, ಶಂಕರ ಮಾಡಲಗಿ, ಕೃಷ್ಣ ಬಾಳೇಕುಂದ್ರಿ, ಫಕ್ಕೀರಪ್ಪ ಸಕ್ರೆಣ್ಣವರ, ಈರಣ್ಣಾ ಕೊಡ್ಲಿ, ಸಂತೋಷ ಸಂಬಣ್ಣವರ, ಸಚಿನ್‌ ಪಾಟೀಲ, ಮಹಾದೇವ ಮಡಿವಾಳರ ಹಾಗೂ ಕಿತ್ತೂರು ಮತ ಕ್ಷೇತ್ರದ ಜಿಪಂ, ತಾಪಂ, ಪಪಂ, ಗ್ರಾಪಂ ಅಧ್ಯಕ್ಷ ರು, ಸದಸ್ಯರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ