ಆ್ಯಪ್ನಗರ

ಶುದ್ಧ ನೀರು ಕೊಡದಿದ್ದರೆ ಕರ್ನಾಟಕಕ್ಕೆ ಸೇರಿಸಿ

ಇಚಲಕರಂಜಿ: ಪಂಚಗಂಗಾ ನದಿ ನೀರು ...

Vijaya Karnataka 5 Jun 2018, 5:00 am
ಇಚಲಕರಂಜಿ: ಪಂಚಗಂಗಾ ನದಿ ನೀರು ಕಲುಷಿತಗೊಂಡಿದ್ದು, ಸ್ವಚ್ಛಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸಿ ಅಥವಾ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಆಗ್ರಹಿಸಿ ಸಮೀಪದ ಮಹಾರಾಷ್ಟ್ರದ ಶಿರಢೋಣ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹ ನಡೆಸಿದರು.
Vijaya Karnataka Web BEL-4ICH4


ಕಳೆದ ಅನೇಕ ವರ್ಷಗಳಿಂದ ಪ್ರೊಸೆಸ್‌, ಸೈಜಿಂಗ್‌, ನೂಲಿನಗಿರಣಿ, ಸಕ್ಕರೆ ಕಾರ್ಖಾನೆಗಳಿಂದ ಹೊರಬಿದ್ದ ಆಯಿಲ್‌ ಮಿಶ್ರಿತ ತ್ಯಾಜ್ಯ ನೀರು ನೇರವಾಗಿ ಪಂಚಗಂಗಾ ನದಿಗೆ ಸೇರುತ್ತಿರುವುದರಿಂದ ನದಿ ನೀರು ಕಲುಷಿತಗೊಂಡಿದೆ. ನದಿ ದಡದಲ್ಲಿರುವ ಶಿರಢೋಣ ಗ್ರಾಮಸ್ಥರು ಅನಿವಾರ್ಯವಾಗಿ ಕಳೆದ ಎರಡು ವರ್ಷಗಳಿಂದ ಕಲುಷಿತ ನೀರು ಕುಡಿದು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸರಕಾರದ ನಿರ್ಲಕ್ಷ ದಿಂದ ಬೇಸರಗೊಂಡ ಗ್ರಾಮಸ್ಥರು ತಮ್ಮ ಕೊರಳಲ್ಲಿ ಕಲುಷಿತ ಜಲಪರ್ಣಿ (ನೀರ್ಬಳ್ಳಿ) ಹಾಕಿಕೊಂಡು ಪಂಚಾಯಿತಿ ಎದುರು ಅರೆಬೆತ್ತಲೆ ಧರಣಿ ನಡೆಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಧೈರ್ಯಶೀಲ ಮಾನೆ, ವಿಶ್ವಾಸ ಬಾಲಿಘಾಟೆ, ಪ್ರಶಾಂತ ಕೂಗೆ, ಮಧುಕರ ಸಾಸಣೆ, ಶಿವಾನಂದ ಕೋರಬು, ಪ್ರಾ.ಚಂದ್ರಕಾಂತ ಮೋರೆ, ಬಾಳಾಸಾಹೇಬ ಮಾನಗಾವೆ, ಅವಿನಾಶ ಪಾಟೀಲ, ಸತೀಶ ಭಂಡಾರೆ, ಬಾಬುರಾವ ಕೋಯಿಕ್‌, ಸಂಜಯ ಶಿಂಧೆ, ಗಜಾನನ ಚಂದೂರೆ, ರಾಜೇಖಾನ ನದಾಫ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 9ರಿಂದ ಸಂಜೆ 6ಗಂಟೆವರೆಗೆ ಧರಣಿ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ