ಆ್ಯಪ್ನಗರ

ಮುಕ್ತಾಯ ಹಂತದಲ್ಲಿಐಎಲ್‌ಎಸ್‌ ಕೆಲಸ

ಹವಾಮಾನ ಮತ್ತು ಕೆಟ್ಟ ಗೋಚರತೆಯ ಸಂದರ್ಭದಲ್ಲಿವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕಾಅಪ್‌ನ ಸುರಕ್ಷತೆಯನ್ನು ಹೆಚ್ಚಿಸುವ ಐಎಲ್‌ಎಸ್‌ (ಇನ್‌ಸ್ಟು್ರಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌) ...

Vijaya Karnataka 27 Jan 2020, 5:00 am
ಬೆಳಗಾವಿ: ಹವಾಮಾನ ಮತ್ತು ಕೆಟ್ಟ ಗೋಚರತೆಯ ಸಂದರ್ಭದಲ್ಲಿವಿಮಾನಗಳ ಲ್ಯಾಂಡಿಂಗ್‌ ಮತ್ತು ಟೇಕಾಅಪ್‌ನ ಸುರಕ್ಷತೆಯನ್ನು ಹೆಚ್ಚಿಸುವ ಐಎಲ್‌ಎಸ್‌ (ಇನ್‌ಸ್ಟು್ರಮೆಂಟ್‌ ಲ್ಯಾಂಡಿಂಗ್‌ ಸಿಸ್ಟಮ್‌) ಕೆಲಸ ಮುಕ್ತಾಯದ ಹಂತದಲ್ಲಿದ್ದು, ಇನ್ನೊಂದು ತಿಂಗಳಲ್ಲಿಕಾರ್ಯಾರಂಭ ಮಾಡಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ ಕುಮಾರ ಮೌರ್ಯ ತಿಳಿಸಿದ್ದಾರೆ.
Vijaya Karnataka Web 26PRAMOD4064125
ಬೆಳಗಾವಿ ವಿಮಾನ ನಿಲ್ದಾಣದಲ್ಲಿಆಯೋಜಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿಗಣ್ಯರು ಪಾಲ್ಗೊಂಡಿದ್ದರು.


ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿಬೆಳಗಾವಿ ವಿಮಾನ ನಿಲ್ದಾಣದಲ್ಲಿ100 ಅಡಿ ಎತ್ತರದ ಧ್ವಜ ಸ್ಥಂಭದಲ್ಲಿರಾಷ್ಟ್ರಧ್ವಜಾರೋಹಣ ಮಾಡಿ ಅವರು ಮಾತನಾಡಿದರು. ಬೆಳಗಾವಿ ವಿಮಾನ ನಿಲ್ದಾಣದಿಂದ ಸದ್ಯ ದೇಶದ ವಿವಿಧ ರಾಜ್ಯಗಳ 8 ನಗರಗಳ ಮಧ್ಯೆ ಪ್ರತಿದಿನ ವಿಮಾನಗಳು ಒಟ್ಟು 28 ಚಲನೆ ಹೊಂದಿವೆ. 14 ವಿಮಾನ ಬಂದರೆ, 14 ವಿಮಾನ ಬೇರೆ ನಗರಗಳಿಗೆ ಹೋಗುತ್ತಿವೆ. ಅಲೈನ್ಸ್‌ ಏರ್‌, ಸ್ಟಾರ್‌ಏರ್‌, ಸ್ಪೈಸ್‌ಜೆಟ್‌, ಇಂಡಿಗೋ ಮತ್ತು ಟ್ರುಜೆಟ್‌ ವಿಮಾನಗಳು ಬೆಳಗಾವಿಯಿಂದ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಭರತನಾಟ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹುತಾತ್ಮ ಗೌರವ ಕ್ಯಾಪ್ಟನ್‌ ಯಲ್ಲಪ್ಪ ಪಾಟೀಲ್‌ ಅವರ ಪತ್ನಿ ನಿರ್ಮಲಾ ಪಾಟೀಲ್‌, ಅಂತಾರಾಷ್ಟ್ರೀಯ ಕುಸ್ತಿ ಪಟು ಅತುಲ್‌ ಶಿರೋಳೆ, ಗುಲ್‌ಮೊಹರ್‌ ಬೆಳಗಾವಿ ತಂಡದ ಕೀರ್ತಿ ಸುರಂಜನ್‌, ಹಿರಿಯ ಕಲಾವಿದೆ ಶಿಲ್ಪಾ ಖಡಗಭರಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ