ಆ್ಯಪ್ನಗರ

ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ಹಾವೇರಿ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ 4ಮೂಲಕ ಅಕ್ರಮವಾಗಿ 362...

Vijaya Karnataka 29 May 2018, 5:00 am
ಯಮಕನಮರಡಿ: ಹಾವೇರಿ ಮಾರ್ಗದಿಂದ ರಾಷ್ಟ್ರೀಯ ಹೆದ್ದಾರಿ 4ಮೂಲಕ ಅಕ್ರಮವಾಗಿ 362.50 ಕ್ವಿಂಟಲ್‌ ಅಕ್ಕಿ ತುಂಬಿಕೊಂಡು ಮುಂಬಯಿಗೆ ತೆರಳುತ್ತಿದ್ದ 22ಚಕ್ರದ ಟ್ರೇಲರ್‌ ಲಾರಿಯನ್ನು ಸಮೀಪದ ಚಿಕ್ಕಾಲಗುಡ್ಡ ಕ್ರಾಸ್‌ ಬಳಿ ಪೊಲೀಸ್‌ ಹಾಗೂ ಆಹಾರ ಇಲಾಖೆಯವರು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
Vijaya Karnataka Web illegal rice transportation truck seized
ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ


ಈ ವಾಹನದ ಮೊತ್ತ 30ಲಕ್ಷ ರೂ. ಎಂದು ಅಂದಾಜಿಸಿದ್ದು 725 ಚೀಲಗಳಲ್ಲಿದ್ದ 5,43,750 ರೂ. ಮೌಲ್ಯದ ಅಕ್ರಮ ಅಕ್ಕಿ ವಶಕ್ಕೆ ಪಡೆದು ಲಾರಿ ಚಾಲಕ, ರಾಜಸ್ಥಾನದ ಉದಯಪುರದ ಸುರೇಂದ್ರಸಿಂಗ್‌ ಭವರ್‌ಸಿಂಗ್‌, ಕ್ಲೀನರ್‌ ಸಾವರಲಾಲಾ ಬಗದಿಲಾಲಾ ಮೀನಾ ಹಾಗೂ ಮಾಲೀಕ ಮೈನುದ್ದೀನ್‌ ಅಮಿಯುದ್ದೀನ್‌ ಶೇಖ್‌ ಎಂಬುವವರನ್ನು ವಶಕ್ಕೆ ಪಡೆದು ಅವರ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆ.

ಯಮಕನಮರಡಿ ಪಿಎಸ್‌ಐ ಎಸ್‌.ಬಿ. ಪಾಟೀಲ, ಮತ್ತು ಆಹಾರ ಇಲಾಖೆಯ ಈಶ್ವರ ದಯಯ್ಯನವರ, ಲೋಕೇಶ ಢಾಂಗೆ, ರಮೇಶ ಕುಂಟೋಳಿ, ಟಿ.ಎಸ್‌. ವಾಲಿಕರ, ಎಲ್‌.ವೈ. ಕಿಲ್ಲಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಮಕನಮರಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ