ಆ್ಯಪ್ನಗರ

ಹೆಚ್ಚಾದ ಬಿಸಿಲಿನ ತಾಪ: ನೆರಳಿನ ಆಶ್ರಯಕ್ಕೆ ಜನ, ಜಾನುವಾರು

ಅಥಣಿ: ಗಡಿಭಾಗದ ಗ್ರಾಮಗಳಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ...

Vijaya Karnataka 23 Feb 2019, 5:00 am
ಅಥಣಿ : ಗಡಿಭಾಗದ ಗ್ರಾಮಗಳಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜನರೊಂದಿಗೆ ಜಾನುವಾರುಗಳೂ ಕೆಲಸ ಸ್ಥಗಿತಗೊಳಿಸಿ ನೆರಳಿನ ಆಶ್ರಯಕ್ಕೆ ಜಾರುತ್ತಿವೆ.
Vijaya Karnataka Web BEL-22 ATHANI-05


ಜೋಳ, ಕಡಲೆ, ಗೋಧಿ ಸೇರಿದಂತೆ ಇನ್ನಿತರ ಹಿಂಗಾರಿ ಬೆಳೆಗಳ ಕೊಯ್ಲಿನ ನಂತರ ಈ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ನೀರಿಲ್ಲದೆ ಭೂಮಿ ಬರಡಾಗಿ ಕಾಣುತ್ತಿದೆ. ಗಡಿ ಭಾಗದ ಸಂಬರಗಿ, ಶಿರೂರ, ಪಾಂಡೇಗಾಂವ, ಖಿಳೇಗಾಂವ, ಅರಳಿಹಟ್ಟಿ, ಮಲಾಬಾದ, ಜಂಬಗಿ, ಮದಬಾವಿ ಸೇರಿದಂತೆ ಈ ಭಾಗದ ಎಲ್ಲ ಗ್ರಾಮಗಳಲ್ಲಿ ಜಮೀನುಗಳು ಬೆಳೆಯಿಲ್ಲದೆ ಖಾಲಿ ಖಾಲಿಯಾಗಿವೆ. ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಮನೆಗಳಲ್ಲಿ ಮಕ್ಕಳು ವೃದ್ಧರು ಅನಾರೋಗ್ಯದಿಂದ ಬಳಲುವುದು ಸಾಮಾನ್ಯವಾಗಿದೆ.

ಜಾನುವಾರುಗಳು ಮೇವು, ನೀರಿನ ಕೊರತೆ ಎದುರಿಸುತ್ತಿದ್ದರೆ, ಜನತೆ ಕುಡಿಯುವ ನೀರಿಲ್ಲದೆ ಬಳಲುತ್ತಿದ್ದಾರೆ. ಇದರ ನಡುವೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿಯಾಗದೆ ರೈತರ ಸಂಕಷ್ಟ ಹೇಳತೀರದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ