ಆ್ಯಪ್ನಗರ

ಭಾರತ ಯುವಕರಿಂದ ಕೂಡಿದೆ, ದೇಶದ ಆರ್ಥಿಕತೆಯೂ ಉತ್ತಮವಾಗಿದೆ: ರಾಷ್ಟ್ರಪತಿ

ಬೆಳಗಾವಿ ನಗರಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಳೆದ ಮೂರು ತಿಂಗಳಲ್ಲಿ ದೇಶದ ಜಿಡಿಪಿ ಸುಧಾರಿಸುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು. ನಗರದ ಕರ್ನಾಟಕ ಲಾ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಯುವಕರಿಂದ ಕೂಡಿದೆ. ದೇಶದ ಆರ್ಥಿಕತೆಯೂ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka Web 15 Sep 2018, 2:21 pm
ಬೆಳಗಾವಿ: ನಗರಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕಳೆದ ಮೂರು ತಿಂಗಳಲ್ಲಿ ದೇಶದ ಜಿಡಿಪಿ ಸುಧಾರಿಸುತ್ತಿದ್ದು, ಇದು ಉತ್ತಮ ಬೆಳವಣಿಗೆ ಎಂದು ಹೇಳಿದರು. ನಗರದ ಕರ್ನಾಟಕ ಲಾ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತ ಯುವಕರಿಂದ ಕೂಡಿದೆ. ದೇಶದ ಆರ್ಥಿಕತೆಯೂ ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web 91368dd9-46ca-41ef-a0a0-14454a4d4e0e


ಆಧುನಿಕತೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಬದಲಾಗಿ ವಾಸ್ತವತೆಗೆ ಹೊಂದಾಣಿಕೆಯಾಗುತ್ತಿರಬೇಕು. ಕಾನೂನಿನಿಂದ ಬಡವರಿಗೆ ನ್ಯಾಯ ಕೊಡಿಸಬೇಕು. ವಕೀಲಿ ಕೆಲಸ ಇಂಥ ಸೇವೆಗೆ ಬಳಕೆಯಾಗಲಿ. ಅದು ವೈಯಕ್ತಿಕ ಹಿತಾಸಕ್ತಿಯ ಉದ್ಯೋಗ ಆಗದಿರಲಿ ಎಂದರು.

ಬಳಿಕ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮಾತನಾಡಿ, ವಕೀಲರು ಸಮಾಜದ ಎಂಜಿನಿಯರ್ ಇದ್ದಂತೆ. ಪ್ರತಿಯೊಂದು ಆಗು ಹೋಗುಗಳಲ್ಲಿ ಅವರ ಪಾತ್ರ ಇರುತ್ತದೆ. ಹೀಗಾಗಿ ಎಲ್ಲರ ದಿನವನ್ನೂ ವಕೀಲರು ಆಚರಿಸಬಹುದು ಎಂದು ವಕೀಲಿ ವೃತ್ತಿಯ ಮಹತ್ವವನ್ನು ಬಣ್ಣಿಸಿದರು.

ಬೆಳಗಾವಿ ನನ್ನ ಜೀವನದಲ್ಲಿ ನೆನಪಿಡುವಂಥದ್ದು: ಸಿಎಂ
ಇನ್ನು, ಸಿಎಂ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಬೆಳಗಾವಿ ನನ್ನ ಜೀವನದಲ್ಲಿ ನೆನಪಿಡುವಂಥದ್ದು. ಅನೇಕ ಮಹನೀಯರು ಬಂದು ಹೋದ ನಾಡಿನಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಹೆಮ್ಮೆಯ ವಿಷಯ. ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಿದ್ದು ಕೂಡ ದಾಖಲೆ ಎಂದ ಅವರು ಕೆಎಲ್ ಎಸ್ ಸಂಸ್ಥೆಯ ಸಾಧನೆಗಳನ್ನು ಹೊಗಳಿದರು.

ಜಾರಕಿಹೊಳಿ ಜತೆ ಸಿಎಂ

ಅಲ್ಲದೆ, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್‌ ಸಹ ಕರ್ನಾಟಕ ಲಾ ಸಂಸ್ಥೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮೋಹನ್ ಶಾಂತನಗೌಡ, ಎಸ್. ಅಬ್ದುಲ್ ನಜೀರ್ ಹಾಗೂ ಸಂಸದ ಸುರೇಶ್ ಅಂಗಡಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ