ಆ್ಯಪ್ನಗರ

ಇಂದಿರಾ ಕ್ಯಾಂಟೀನ್‌: ವಿಧಾನಸಭೆಯಲ್ಲಿ ವಿಕ ವರದಿ ಪ್ರತಿಧ್ವನಿ

ಇಂದಿರಾ ಕ್ಯಾಂಟೀನ್‌ನಲ್ಲಿ ಗುಣ ಮಟ್ಟದ ಉಪಾಹಾರ ಪೂರೈಸದೆ ಇರುವ ಬಗ್ಗೆ 'ಬಡವರ ಅನ್ನಕ್ಕೂ ಕನ್ನ' ಶೀರ್ಷಿಕೆಯಡಿ 'ವಿಕ'ದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಸೋಮವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.

Vijaya Karnataka 21 Nov 2017, 9:13 am
ಬೆಳಗಾವಿ: ಇಂದಿರಾ ಕ್ಯಾಂಟೀನ್‌ನಲ್ಲಿ ಗುಣ ಮಟ್ಟದ ಉಪಾಹಾರ ಪೂರೈಸದೆ ಇರುವ ಬಗ್ಗೆ 'ಬಡವರ ಅನ್ನಕ್ಕೂ ಕನ್ನ' ಶೀರ್ಷಿಕೆಯಡಿ 'ವಿಕ'ದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಸೋಮವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು.
Vijaya Karnataka Web indira canteen vijaya karnataka report mention in assembly
ಇಂದಿರಾ ಕ್ಯಾಂಟೀನ್‌: ವಿಧಾನಸಭೆಯಲ್ಲಿ ವಿಕ ವರದಿ ಪ್ರತಿಧ್ವನಿ


ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್‌ ಈ ವಿಚಾರ ಪ್ರಸ್ತಾಪಿಸಿದರು. 'ಇಂದಿರಾ ಕ್ಯಾಂಟೀನ್‌ ತೆರೆಯುವುದಕ್ಕೆ ನಮ್ಮ ವಿರೋಧ ಇರಲಿಲ್ಲ. ಆದರೆ ಉತ್ತಮ ಆಹಾರ ನೀಡಬೇಕೆಂದು ಹೇಳಿದ್ದೆವು. ಪತ್ರಿಕೆ ಈ ಸಂಬಂಧ ರಿಯಾಲಿಟಿ ಚೆಕ್‌ ನಡೆಸಿದೆ. ಗುಣಮಟ್ಟದ ಆಹಾರ ಪೂರೈಸದೆ ಇರುವುದು ಈ ವೇಳೆ ಗೊತ್ತಾಗಿದೆ' ಎಂದರು.

'ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತಮ ಆಹಾರ ನೀಡದೆ ಇರುವುದರ ಬಗ್ಗೆ ತನಿಖೆಯಾಗಬೇಕು. ಜಿಲ್ಲೆ, ತಾಲೂಕಿನಲ್ಲೂ ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದಾರೆ. ಪೌಷ್ಟಿಕಾಂಶದ ಆಹಾರ ನೀಡಲು ಆದ್ಯತೆ ಕೊಡಬೇಕು' ಎಂದು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ