ಆ್ಯಪ್ನಗರ

ಸಂಕೇಶ್ವರಕ್ಕೂ ವ್ಯಾಪಿಸಿದ ಸೋಂಕು

ಹುಕ್ಕೇರಿ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಕೊರೊನಾ ...

Vijaya Karnataka 17 Apr 2020, 5:00 am
ಹುಕ್ಕೇರಿ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿಕೊರೊನಾ ಸೋಂಕು ದೃಢಪಟ್ಟಿದ್ದು, ಪಟ್ಟಣವನ್ನು ಸೀಲ್‌ಡೌನ್‌ ಮಾಡಲಾಗಿದೆ.
Vijaya Karnataka Web 16 HUKKERI 01_53
ಸೋಂಕಿತ ವ್ಯಕ್ತಿ ವಾಸವಿದ್ದ ಸಂಕೇಶ್ವರ ಪಟ್ಟಣದ ಬಡಾವಣೆಯಲ್ಲಿಅಗ್ನಿಶಾಮಕ ಸಿಬ್ಬಂದಿ ಸೋಂಕು ನಿವಾರಣೆ ದ್ರಾವಣ ಸಿಂಪಡಿಸುತ್ತಿರುವುದು.


''ಕೊರೊನಾ ಸೋಂಕು ದೃಢಪಟ್ಟಿರುವ ಪಟ್ಟಣದ ವ್ಯಕ್ತಿ ದಿಲ್ಲಿಯಿಂದ ಬಂದ ಬಳಿಕ 3 ದಿನ ಮನೆಯಲ್ಲಿವಾಸವಿದ್ದರು. ಪಾಶ್ರ್ವವಾಯು ಪೀಡಿತರೂ ಆಗಿರುವ ಸೋಂಕಿತ ವ್ಯಕ್ತಿಯ ಮನೆಯ ಸದಸ್ಯರು, ಆ ವ್ಯಕ್ತಿಯ ಸ್ನೇಹಿತರು ಹಾಗೂ ಅವರನ್ನು ಭೇಟಿ ಮಾಡಿದ ಎಲ್ಲರನ್ನೂ ಪತ್ತೆ ಮಾಡಿ ಹೋಂ ಕ್ವಾರಂಟೈನ್‌ನಲ್ಲಿಇಡಲಾಗುವುದು'', ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ. ಉದಯ ಕುಡಚಿ ತಿಳಿಸಿದ್ದಾರೆ.

ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿಪುರಸಭೆ ಹಾಗೂ ಅಗ್ನಿ ಶಾಮಕದ ಸಿಬ್ಬಂದಿ ಬಡಾವಣೆಯಲ್ಲಿಸೋಂಕು ನಿವಾರಣೆ ದ್ರಾವಣ ಸಿಂಪಡಿಸಿದ್ದಾರೆ. ಅಲ್ಲದೇ ಬಸ್‌ ನಿಲ್ದಾಣ, ನಿಡಸೋಸಿ, ಅಂಕಲಿ, ಗಡಹಿಂಗ್ಲಜ್‌ ರಸ್ತೆ, ಕಮತನೂರ ಕ್ರಾಸ್‌ ಸೇರಿದಂತೆ ಸುತ್ತಲಿನ 3 ಕಿಮೀ ಪ್ರದೇಶವನ್ನು ಬಂದ್‌ ಮಾಡಲಾಗಿದೆ. ಇನ್ನು ಕೆಲವು ಬಡಾವಣೆ ಜನ ಸ್ವಯಂ ಪ್ರೇರಿತವಾಗಿ ರಸ್ತೆ ಬಂದ್‌ ಮಾಡಿದ್ದಾರೆ.

ಉಪವಿಭಾಗಾಧಿಕಾರಿ ಅಶೋಕ ತೇಲಿ, ಸೋಂಕಿತ ವ್ಯಕ್ತಿ ವಾಸವಿದ್ದ ಬಡಾವಣೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ